ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಅಂತಿಮವಾಗಿ 441 ರನ್‍ಗಳ ಟಾರ್ಗೆಟ್ ನೀಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 155 ರನ್‍ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 87 ಓವರ್‍ಗಳಿಗೆ 285 ರನ್ ಕಲೆ ಹಾಕಿ ಆಲ್‍ಔಟ್ ಆಯಿತು. ಆಸೀಸ್ ಪರ ಸ್ಮಿತ್ ಶತಕದಾಟವಾಡಿ ಟೀಂ ಇಂಡಿಯಾ ಬೌಲರ್‍ಗಳ ಬೆವರಿಳಿಸಿದ್ರು. ಸ್ಟೀವನ್ ಸ್ಮಿತ್ 202 ಬಾಲ್‍ಗಳಿಗೆ 11 ಬೌಂಡರಿ ಸೇರಿದಂತೆ 109 ರನ್ ಗಳಿಸಿದ್ರು.
ಭಾರತದ ಪರ ಆರ್ ಅಶ್ವಿನ್ 4 ವಿಕೆಟ್ ಪಡೆದ್ರೆ, ಜಡೇಜಾ, ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದ್ರು.