ಬೆಂಗಳೂರು: ನಭೋಮಂಡಲದ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಹುಣ್ಣಿಮೆ ಬೆಳಂದಿಗಳಲ್ಲಿ ಕೆಂಪು ಕೆಂಪಾಗಿ ಚಂದ್ರ ಬದಲಾಗಲಿದ್ದಾನೆ. ಹಾಗಿದ್ರೇ ಚಂದ್ರಗ್ರಹಣ (Lunar Eclipse) ಅವಧಿಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಗ್ರಹಣ ಯಾಕೆ ಸೂತಕ ಕಾಲ ಅಂತಾ ಕರೆಯುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಇಂದು ರಾತ್ರಿ 09:57 ರಿಂದ ಶುರುವಾಗಿ ಮಧ್ಯರಾತ್ರಿ 01:26ರ ವರೆಗೆ ಚಂದ್ರ ಗ್ರಹಣ ಇರಲಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಗ್ರಹಣ ಅಂದ್ರೆ ಅದು ಅಶುಭ. ದೇವರಿಗೆ ಸಂಕಷ್ಟದ ಸಮಯ. ಹೀಗಾಗಿ ಅದು ಸೂತಕದ ಸಮಯವೆಂದೇ ಕರೆಯಲಾಗುತ್ತದೆ. ಈ ವೇಳೆ ಶುಭಕಾರ್ಯಗಳು ನಿಷಿದ್ಧವಾಗಿದೆ. ಚಂದ್ರಗ್ರಹಣದ ಸೂತಕ ಅವಧಿ ಇಂದು ಮಧ್ಯಾಹ್ನ 12:57ಕ್ಕೆ ಪ್ರಾರಂಭವಾಗಿ ಗ್ರಹಣ ಮುಗಿದ ತಕ್ಷಣ ಸೂತಕ ಅವಧಿಯು ಕೊನೆಗೊಳ್ಳುತ್ತದೆ.
ಗ್ರಹಣದ ಅವಧಿಯಲ್ಲಿ ಏನು ಮಾಡಬೇಕು?
* ದುರ್ಗಾ ಸ್ತುತಿ, ಈಶ್ವರನ ಜಪ, ಮಂತ್ರಪಠಣೆ ಮಾಡಬೇಕು
* ಗ್ರಹಣ ಸ್ಪರ್ಶವಾದ ಕೂಡಲೇ ಸ್ನಾನ ಮಾಡಿ
* ದೇವತಾ ಮೂರ್ತಿಗಳನ್ನು & ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿ
* ಮಂತ್ರ ಜಪ, ಪಾರಾಯಣಗಳನ್ನು ಮಾಡಬೇಕು
ಇನ್ನು ಗ್ರಹಣದ ಸೂತಕ ಪ್ರಾರಂಭವಾಗುವ ಮೊದಲು, ಆಹಾರ ಮತ್ತು ನೀರಿನಲ್ಲಿ ತುಳಸಿ ಎಲೆಗಳನ್ನು, ದರ್ಬೆಗಳನ್ನು ಹಾಕಿ, ಇದ್ರಿಂದ ಗ್ರಹಣದ ಪ್ರಭಾವ ಭಾದಿಸುವುದಿಲ್ಲ. ಗ್ರಹಣದ ಸಮಯದಲ್ಲಿ ದೇವರನ್ನು ಸ್ಮರಿಸಿ, ಮಂತ್ರಗಳನ್ನು ಪಠಿಸಿ. ಗ್ರಹಣದ ನಂತರ ಸ್ನಾನ ಮಾಡಿ ಬಡವರಿಗೆ ದಾನ ಮಾಡಿ. ಚಂದ್ರಗ್ರಹಣದ ದಿನದಂದು ಅಕ್ಕಿ, ಉದ್ದಿನ ಬೇಳೆ, ಹಾಲು, ತುಪ್ಪ, ಬಿಳಿ ಬಟ್ಟೆ ಮತ್ತು ಬೆಳ್ಳಿಯನ್ನು ದಾನ ಮಾಡುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. ಗ್ರಹಣ ಮುಗಿದ ನಂತರ, ಸ್ನಾನ ಮಾಡಿ ಇಡೀ ಮನೆಯ ಮೇಲೆ ಗಂಗಾಜಲವನ್ನು ಸಿಂಪಡಿಸಿದ್ರೇ ಉತ್ತಮ.
ಗ್ರಹಣದ ಸಮಯದಲ್ಲಿ ಏನು ಮಾಡಬಾರದು?
* ಚಂದ್ರಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು
* ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ವಿನಾಯ್ತಿ
* ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗುತ್ತವೆ
* ಇದರಿಂದಾಗಿ ಪರಿಸರದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ
* ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದು ನಿಷೇಧ
* ಮದುವೆ, ಗೃಹ ಪ್ರವೇಶ ಆಚರಿಸುವುದು ಬೇಡ
* ಹೊಸ ಕಾರು ಖರೀದಿ, ಹೊಸ ವೃತ್ತಿಜೀವನ ಪ್ರಾರಂಭ ತಪ್ಪಿಸಿ
* ಗ್ರಹಣ ಸಮಯದಲ್ಲಿ, ದೇವರ ವಿಗ್ರಹಗಳನ್ನು ಮುಟ್ಟುವುದು ಸರಿಯಲ್ಲ
* ತುಳಸಿ ಗಿಡವನ್ನು ಮುಟ್ಟಬಾರದು.