ಪರ್ತ್: ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಂತಾಗಿದೆ.
287 ರನ್ ಗುರಿ ಪಡೆದ ಟೀಂ ಇಂಡಿಯಾ 56 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಯ್ತು. 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ ಇಂದು ತನ್ನ ಖಾತೆಗೆ 38 ರನ್ ಮಾತ್ರ ಸೇರಿಸಿತು.
Advertisement
Advertisement
ಹನುಮ ವಿಹಾರಿ 28 ರನ್, ರಿಷಬ್ ಪಂತ್ 30, ಉಮೇಶ್ ಯಾದವ್ 2 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಮತ್ತು ಬುಮ್ರಾ 0 ಸುತ್ತಿದರು. ಕೊನೆಯ ನಾಲ್ಕು ವಿಕೆಟ್ 3 ರನ್‍ಗಳ ಅಂತರದಲ್ಲಿ ಕಳೆದುಕೊಂಡ ಪರಿಣಾಮ ಭಾರತ ಹೀನಾಯ ಸೋಲು ಕಂಡಿದೆ.
Advertisement
ನಥನ್ ಲಿಯಾನ್ ಮತ್ತು ಸ್ಟ್ರಾಕ್ ತಲಾ 3 ವಿಕೆಟ್, ಹ್ಯಾಝಲ್‍ವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಸೇರಿದಂತೆ ಈ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿದ ಸ್ಪಿನ್ನರ್ ಲಿಯಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Advertisement
ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ 30 ರವರೆಗೆ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಭಾರತ 31 ರನ್ ಗಳಿಂದ ಗೆದ್ದುಕೊಂಡಿತ್ತು.
The GOAT always happy to help ????????#AUSvIND pic.twitter.com/thhUFsP6iw
— cricket.com.au (@cricketcomau) December 18, 2018
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 326/10, 108.3 ಓವರ್
ಭಾರತ ಮೊದಲ ಇನ್ನಿಂಗ್ಸ್ – 283/10, 105.5 ಓವರ್
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ – 243/10, 93.2 ಓವರ್
ಭಾರತ ಎರಡನೇ ಇನ್ನಿಂಗ್ಸ್ – 140/10, 56 ಓವರ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv