ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಬೇಕಿದ್ದ 2ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ಇದರೊಂದಿಗೆ 3 ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ.
ಸರಣಿಯ ಮುಂದಿನ ಪಂದ್ಯ ಭಾನುವಾರ ನಡೆಯಲಿದ್ದು, ಈಗಾಗಲೇ ಮೊದಲ ಪಂದ್ಯದಲ್ಲಿ ಆಸೀಸ್ ಗೆಲುವು ಪಡೆದಿರುವುದರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ 3ನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಸಮಬಲ ಸಾಧಿಬೇಕಿದೆ.
Advertisement
Sadly, the play has been called off at the MCG. Australia take a 1-0 series lead with one more game to go.#AUSvIND pic.twitter.com/C3b9iKxNM2
— BCCI (@BCCI) November 23, 2018
Advertisement
ಇಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ಬಿಗು ಬೌಲಿಂಗ್ ದಾಳಿ ನಡೆಸಿದರು. ಟಾಸ್ ಸೋತು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಆಸೀಸ್ ಆರಂಭಿಕ ಆಘಾತ ಎದುರಿಸಿತು. ವೇಗಿ ಭುವನೇಶ್ವರ್ ಕುಮಾರ್ ಮೊದಲ ಓವರ್‍ನ 2ನೇ ಎಸೆತದಲ್ಲಿ ನಾಯಕ ಫಿಂಚ್ ವಿಕೆಟ್ ಪಡೆಯುವ ಮೂಲಕ ಮೊದಲ ಆಘಾತ ನೀಡಿದರು. ಇದರ ಬೆನ್ನಲ್ಲೇ ಕ್ರಿಸ್ ಲಿನ್ 13 ರನ್ ಹಾಗೂ 14 ರನ್ ಗಳಿಸಿದ್ದ ಆರಂಭಿಕ ಡಾರ್ಸಿ ಶಾರ್ಟ್ ರನ್ನು ಯುವ ವೇಗಿ ಖಲೀಲ್ ಅಹ್ಮದ್ ಪೆವಿಲಿಯನ್ ನತ್ತ ನಡೆಯುವಂತೆ ಮಾಡಿದರು.
Advertisement
Khaleel Ahmed is on fire ????????
Picks up two crucial wickets. Lynn and Darcy Short back in the hut. Australia 35/3 in 5.3 overs.
Live – https://t.co/ZHonO1GQJF #AUSvIND pic.twitter.com/i3xbfQR8Va
— BCCI (@BCCI) November 23, 2018
Advertisement
ಈ ಹಂತದಲ್ಲಿ ಆಸೀಸ್ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಬಿರುಸಿನ ಆಟಕ್ಕೆ ಮುಂದಾಗುತ್ತಿದಂತೆ ಆಲ್‍ರೌಂಡರ್ ಕೃಣಾಲ್ ಪಾಂಡ್ಯ ಮ್ಯಾಕ್ಸ್ ವೆಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇರೊಂದಿಗೆ 11 ಓವರ್ ಗಳ ಮುಕ್ತಾಯ ವೇಳೆಗೆ ಆಸೀಸ್ ಪ್ರಮುಖ 5 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಈ ಹಂತದಲ್ಲಿ ಆಸೀಸ್ ರನ್ ವೇಗಕ್ಕೆ ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ ಬ್ರೇಕ್ ಹಾಕಿದರು. ಅಲೆಕ್ಸ್ ಕ್ಯಾರೆ 4 ರನ್ ಗಳಿಸಿದರೆ, ಕೇವಲ 9 ಎಸೆತ ಎದುರಿಸಿ 18 ರನ್ ಸಿಡಿಸಿದ ಕೌಲ್ಟರ್ ನೈಲ್ ಭಾರಿ ಹೊಡೆತಕ್ಕೆ ಕೈ ಹಾಕಿ ಭುವನೇಶ್ವರ್ ಕುಮಾರ್ ಬೌಲಿಂಗ್‍ನಲ್ಲಿ ಔಟಾದರು. ಇತ್ತ ವಿಕೆಟ್ ಉರುಳುತ್ತಿದ್ದರು ತಂಡಕ್ಕೆ ಆಸರೆಯಾಗಿದ್ದ ಡರ್ಮಾಟ್ 30 ಎಸೆತಗಳಲ್ಲಿ 32 ರನ್ ಹಾಗೂ ಟೈ 12 ರನ್ ಗಳಿಸಿದ್ದ ವೇಳೆ ವರುಣ ಮಳೆ ಅಡ್ಡಿಪಡಿಸಿದ್ದ ಕಾರಣ ಪಂದ್ಯ ಸ್ಥಗಿತಗೊಂಡಿತ್ತು.
ಈ ಹಂತದಲ್ಲಿ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 11 ಓವರ್ ಗಳಲ್ಲಿ 90 ರನ್ ಗುರಿ ನೀಡಲಾಗಿತ್ತು. ಆದರೆ ಮತ್ತೆ ಮಳೆ ಆಟ ಆರಂಭವಾಗಲು ಅವಕಾಶ ನೀಡಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ಪರ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ 2 ವಿಕೆಟ್ ಪಡೆದರೆ, ಬೂಮ್ರಾ, ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
#TeamIndia need 90 runs in 11 overs (DLS) to win the 2nd T20I.#AUSvIND pic.twitter.com/KFtgGtULjf
— BCCI (@BCCI) November 23, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv