ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಸೀಸ್ ನಡುವೆ ನಡೆದ 4ನೇ ಏಕದಿನ ಪಂದ್ಯದಲ್ಲಿ ರನ್ ಹೊಳೆಯೇ ಹಾರಿದಿದ್ದು, ಆಸ್ಟ್ರೇಲಿಯಾ 4 ವಿಕೆಟ್ ಗಳಿಂದ ಗೆದ್ದು ಬಿಗಿದೆ.
ಟೀಂ ಇಂಡಿಯಾ ನೀಡಿದ 359 ರನ್ ಗುರಿಯನ್ನು ಬೆನ್ನತ್ತಿದ ಆಸೀಸ್ ಪಡೆ 13 ಎಸೆತ ಬಾಕಿ ಇರುವಂತೆಯೇ ರನ್ ಸಿಡಿಸಿ ಗೆಲುವಿನ ಸವಿ ಪಡೆಯಿತು. ಪರಿಣಾಮ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಪಂದ್ಯ ಇತ್ತಂಡಗಳಿಗೂ ಮಾಡು ಇಲ್ಲವೇ ಮಾಡಿ ಎಂಬಂತಾಗಿದೆ.
Advertisement
AUSTRALIA WIN! Ashton Turner take a bow. The series is tied, we have a decider on Wednesday! #INDvAUS pic.twitter.com/k3bDvJFTa9
— cricket.com.au (@cricketcomau) March 10, 2019
Advertisement
ಆರಂಭದಲ್ಲಿ ಫಿಂಚ್ ಶೂನ್ಯಕ್ಕೆ ಔಟ್ ಮಾಡಿ ಭುವನೇಶ್ವರ್ ಮೊದಲ ಅಘಾತ ನೀಡಿದರೆ, 6 ರನ್ ಗಳಿಸಿದ್ದ ವೇಳೆ ಮಾರ್ಶ್ ವಿಕೆಟನ್ನು ಪಡೆಯುವ ಮೂಲಕ ಬುಮ್ರಾ 2ನೇ ಅಘಾತ ನೀಡದರು. ಆದರೆ ಈ ಹಂತದಲ್ಲಿ ಒಂದಾದ ಖವಾಜಾ, ಹ್ಯಾಡ್ಸ್‍ಕಾಂಬ್ ಭರ್ಜರಿ ಆಟ ಪ್ರದರ್ಶಿಸಿ ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸಿದರು.
Advertisement
ಖವಾಜಾ 99 ಎಸೆತಗಳಲ್ಲಿ 91 ರನ್, ಹ್ಯಾಡ್ಸ್ ಕಂಬ್ 105 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಗಳ ನೆರವಿನಿಂದ 117 ರನ್ ಗಳಿಸಿದರು. ಅಲ್ಲದೇ ನಿರ್ಣಾಯಕ ಹಂತದಲ್ಲಿ ಸ್ಫೋಟಕ ಆಟವಾಡಿದ ಟರ್ನರ್ 40 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಗಳ ನೆರವಿನಿಂದ 80 ರನ್ ಸಿಡಿಸಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾದರು.
Advertisement
Australia need 98 runs from the final 10 overs if they are to force a deciding ODI.
LIVE: https://t.co/iCK26mSpUz #INDvAUS pic.twitter.com/cJkZ6LB0qL
— cricket.com.au (@cricketcomau) March 10, 2019
359 ರನ್ ಗಳ ಗುರಿಯನ್ನು ತಲುಪುವ ಮೂಲಕ ಆಸ್ಟ್ರೇಲಿಯಾ ಚೇಸಿಂಗ್ ನಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿತು. ಈ ಹಿಂದೆ 2011 ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಗಳನ್ನು ಬೆನ್ನತ್ತಿ ಗೆಲುವು ಪಡೆದಿತ್ತು.
ಟೀಂ ಇಂಡಿಯಾ ಪರ ದುಬಾರಿಯಾದ ಬೌಲರ್ ಗಳು ಆಸೀಸ್ ಆಟಗಾರರನ್ನು ಕಟ್ಟಿ ಹಾಕಲು ವಿಫಲರಾದರು. ಬುಮ್ರಾ 8/59 ರನ್ ನೀಡಿ 2 ವಿಕೆಟ್ ಪಡೆದರೆ, ಚಹಲ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಧವನ್ 143 ರನ್ (115 ಎಸೆತ, 18 ಬೌಂಡರಿ, 3 ಸಿಕ್ಸರ್) ಹಾಗೂ ರೋಹಿತ್ ಶರ್ಮಾ 95 ರನ್ (92 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಸಿ ಮಿಂಚಿದ್ದರು. ಅಲ್ಲದೇ ಅಂತಿಮ ಹಂತದಲ್ಲಿ ಪಂತ್ 36, ಶಂಕರ್ 26 ರನ್ ಗಳಿಸಿದ ಪರಿಣಾಮ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 358 ರನ್ ಗಳಿಸಿತ್ತು.
That's that from Mohali.
What a finish this by Australia. They win the 4th ODI by 4 wickets and level the 5 match series 2-2. Onto Delhi for the decider #INDvAUS pic.twitter.com/ODegTmcG1k
— BCCI (@BCCI) March 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv