ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆ 87 ವರ್ಷದ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ.
1931ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,559 ಮಿ.ಮೀ ಮಳೆಯಾಗಿತ್ತು. ಆದರೆ ಈ ಆಗಸ್ಟ್ ನಲ್ಲಿ 1,675 ಮಿ.ಮೀ(ಆಗಸ್ಟ್ 21ರ ಅಂತ್ಯಕ್ಕೆ) ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಇದನ್ನೂ ಓದಿ: ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!
ಇದರಲ್ಲಿ 768 ಮಿ.ಮೀ(45%) ರಷ್ಟು ಮಳೆ ಆಗಸ್ಟ್ 15, 16, 17ರ ಮೂರೇ ದಿನದಲ್ಲಿ ಸುರಿದಿದೆ. ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಲು ಮಹಾಮಳೆಯೇ ಕಾರಣವಾಗಿದೆ. ಒಂದು ದಿನದಲ್ಲೇ 200 ಮಿ.ಮೀಗಿಂತಲೂ ಜಾಸ್ತಿ ಮಳೆಯಾಗಿದೆ. ಅಷ್ಟೇ ಅಲ್ಲದೇ ನಿರಂತರ ಮೂರು ದಿನ ಮಳೆಯಾದ ಕಾರಣ ಕೊಡಗಿನಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಐಎಂಡಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.
ಆಗಸ್ಟ್ 17 ಶುಕ್ರವಾರ ಒಂದೇ ದಿನ 300 ಮಿ.ಮೀ ಮಳೆಯಾಗಿತ್ತು. ಈ ದಿನವೇ ಸಂಪಾಜೆ ಘಾಟಿ ಪ್ರದೇಶಗಳಾದ ಮದೆನಾಡು, ಜೋಡುಪಾಲದಲ್ಲಿ ಭಾರೀ ಕುಸಿತವಾಗಿ ನದಿಯಂತೆ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದಿತ್ತು. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv