ಉಡುಪಿ: ವಿಶೇಷಗಳಲ್ಲಿ ಬಹು ವಿಶೇಷ ಇಂದಿನ ರಾತ್ರಿ. ಕಾರಣ ಬಾನಂಗಳದಲ್ಲಿ ಚಂದ ಮಾಮ ಇನ್ನೂ ಚಂದವಾಗಿ ಕಾಣಿಸ್ತಾನೆ. ಇವತ್ತು ರಾತ್ರಿ ಸೂಪರ್ ಮೂನ್ (Super Moon). ಈ ವರ್ಷದ 4 ಸೂಪರ್ ಮೂನ್‌ಗಳಲ್ಲಿ ಆಗಸ್ಟ್ 31 ರ ಸೂಪರ್ ಮೂನ್ ಅತ್ಯಂತ ಹೆಚ್ಚಿನ ಮಹತ್ವದ್ದು. ಈ ವರ್ಷದ ನಾಲ್ಕು ಸೂಪರ್ ಮೂನ್‌ಗಳು, ಜುಲೈ 3, ಆಗಸ್ಟ್ 1, ಆಗಸ್ಟ್ 31 ಹಾಗೂ ಸೆಪ್ಟೆಂಬರ್ 29 ರಂದು ಗೋಚರವಾಗಲಿದೆ. ಜುಲೈ 3 ರಂದು ಚಂದ್ರ ಭೂಮಿಯಿಂದ 3,61,800 ಕಿಮೀ, ಆಗಸ್ಟ್ 1 ರಂದು 3,57,530 ಕಿಮೀ ಹತ್ತಿರ ಬಂದಿದ್ದ.
ಇಂದು (ಆಗಸ್ಟ್ 31) 3,57,344 ಕಿಮೀ ಹಾಗೂ ಸೆಪ್ಟೆಂಬರ್ 29 ರಂದು 3,61,552 ಕಿಮೀನಷ್ಟು ದೂರಕ್ಕೆ ಬಂದಿದ್ದಾನೆ. ಶ್ರಾವಣದ ಈ ಹುಣ್ಣಿಮೆಯ ಚಂದ್ರ ‘ಸೂಪರ್ ಮೂನ್’ ಆಗಿ ಹೆಚ್ಚಿನ ಪ್ರಭೆಯಿಂದ ಕಂಗೊಳಿಸಲಿದ್ದಾನೆ ಎಂದು ಹಿರಿಯ ಖಗೋಳ ತಜ್ಞ ಉಡುಪಿಯ ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Super Blue Moon: ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನ
Advertisement
Advertisement
ಈ ನಾಲ್ಕರಲ್ಲಿ ಇಂದು ಭೂಮಿಗಿ ಹೆಚ್ಚು ಸಮೀಪ ಬರಲಿದೆ. ಈ ಹುಣ್ಣಿಮೆ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆ ಹೊರ ಸೂಸಲಿದ್ದಾನೆ. ಈ ಸಂದರ್ಭದಲ್ಲಿ ಭಾರತದ ಚಂದ್ರಯಾನ-3 ಸಂಪೂರ್ಣ ಯಶಸ್ಸಿನಲ್ಲಿ ಮುಂದುವರಿಯುತ್ತಿದೆ. ರೋವರ್ ಚಂದ್ರನಲ್ಲಿಗೆ ಕಳುಹಿಸಿ, ವಿಕ್ರಮ್ ಲ್ಯಾಂಡರ್ ಇಳಿಸಿ, ಪ್ರಜ್ಞಾನನ ಪುಟ್ಟ ಪುಟ್ಟ ಹೆಜ್ಜೆಗಳ ತಿರುಗಾಟ ಪ್ರಯೋಗಗಳ ಯಶಸ್ಸು ಕಾಣುತ್ತಿದೆ.
Advertisement
Advertisement
ಈ ಸಂತೋಷದ ಸಮಯದಲ್ಲಿ ಹುಣ್ಣಿಮೆ ಹೋಳಿಗೆ ಊಟದೊಂದಿಗೆ ಭಾರತೀಯರಿಗೆ ಸಂಭ್ರಮ ಪಡಲೋಸುಗ ಈ ಸೂಪರ್ ಮೂನ್ ಬಂದಿದೆಯೋ ಎನ್ನುವಂತಿದೆ. ಆಗಸ್ಟ್ 31 ರ ಸೂಪರ್ ಮೂನ್ ಇನ್ನೂ ಒಂದು ವಿಶೇಷ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು. ಅದರಲ್ಲೂ ಇವೆರಡೂ ಸೂಪರ್ ಮೂನ್. ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ ಎಂದು ಎ.ಪಿ ಭಟ್ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್
Web Stories