ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ ‘ಚೋಳ’ ಟೀಸರ್!

Public TV
2 Min Read
CHOLA FILM 3

ತ್ತರ ಕರ್ನಾಟಕ ಸೀಮೆಯಲ್ಲಿ ಸಿನಿಮಾ ಸಾಹಸಗಳನ್ನು ಮಾಡುತ್ತಾ ಕರ್ನಾಟಕದ ತುಂಬೆಲ್ಲ ಪ್ರಸಿದ್ಧಿ ಪಡೆದುಕೊಂಡಿರುವವರು ಅಂಜನ್. ಬಹುಶಃ ಬರೀ ಅಂಜನ್ ಅಂದರೆ ಗುರುತು ಹತ್ತೋದು ಕಷ್ಟ. ರೂರಲ್ ಸ್ಟಾರ್ ಅಂಜನ್ ಅಂದರೆ ಕಲಾ ಪ್ರೇಮಿಗಳೆಲ್ಲ ಕಣ್ಣರಳಿಸುತ್ತಾರೆ. ಹೀಗೆ ಸೀಮಿತ ಚೌಕಟ್ಟಿನಲ್ಲಿ ಒಂದಷ್ಟು ಹೆಸರಾಗಿರುವ ಅಂಜನ್ ಇದೀಗ ‘ಚೋಳ’ (Chola Film) ಎಂಬ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ವಿಶೇಷವೆಂದರೆ, ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸುರೇಶ್ ಡಿ.ಎಂ (Suresh D.M) ಅವರು ‘ಚೋಳ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ಟೀಸರ್ ಇದೇ ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ:ವಿಕ್ಕಿ ಜೈನ್‌ ಜೊತೆ ಮತ್ತೆ ಮದುವೆಯಾದ ಅಂಕಿತಾ ಲೋಖಂಡೆ

chola film 4

ತನ್ನ ಸೃಷ್ಟಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಸುರೇಶ್ ಡಿ.ಎಂ ‘ಪ್ರಯಾಣಿಕರ ಗಮನಕ್ಕೆ’ ‘ರಣಹೇಡಿ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಭಿನ್ನ ಕಥಾನಕದೊಂದಿಗೆ ಚೋಳ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರತಿಭೆಯಾದ ರೂರಲ್ ಸ್ಟಾರ್ ಅಂಜನ್‍ರನ್ನು ನಾಯಕನನ್ನಾಗಿಸುವ ಮೂಲಕ, ಅವರ ಕನಸುಗಳಿಗೆ ಜೊತೆಯಾಗಿದ್ದಾರೆ. ಅಂದಹಾಗೆ, ಚೋಳ ಎಂಬ ಟೈಟಲ್ ಕೇಳಿದಾಕ್ಷಣವೇ ಇದೊಂದು ಐತಿಹಾಸಿಕ ಕಥಾ ಹಂದರದ ಚಿತ್ರವಾ ಎಂಬಂಥಾ ಅನುಮಾನ ಕಾಡುತ್ತದೆ. ಆದರೆ, ಇದು ಪಕ್ಕಾ ಆಧುನಿಕ ಕಥನ. ಪ್ರೀತಿ, ರೌಡಿಸಂ ಸೇರಿದಂತೆ ಎಲ್ಲವೂ ಬೆರೆತಿರುವ ಚಿತ್ರವೆಂಬ ಸ್ಪಷ್ಟನೆ ನಿರ್ದೇಶಕರ ಕಡೆಯಿಂದ ಸಿಗುತ್ತದೆ.

CHOLA FILM

ಯರ್ರಾಬಿರ್ರಿ ಅಂತೊಂದು ಸಿನಿಮಾ ಮಾಡಿದ್ದ ರೂರಲ್ ಸ್ಟಾರ್ ಅಂಜನ್‍ರ (Anjan) ಪ್ರತಿಭೆಯನ್ನು ಗಮನಿಸಿದ್ದ ನಿರ್ದೇಶಕ ಸುರೇಶ್ ಈ ಚಿತ್ರಕ್ಕೆ ನಾಯಕನನ್ನಾಗಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿಶಾ ಪಾಂಡೆ (Disha Panday) ಮತ್ತು ಪ್ರತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ರಾಜ ಬಲವಾಡಿ ವಿಲನ್‌ಗಳಾಗಿ ನಟಿಸಿದ್ದಾರೆ. ಮನಮೋಹನ್ ರಾಯ್ ರಂಥ ಹಿರಿಯ ನಟರು ವಿಶೇಷಪಾತ್ರಗಳನ್ನು ನಿಭಾಯಿಸಿದ್ದಾರೆ. ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು, ವರ್ಧನ್‌ ತೀರ್ಥಹಳ್ಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

CHOLA FILM 2

ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್.ಎ ಸಂಕಲನ ಈ ಚಿತ್ರಕ್ಕಿದೆ. ಸಾಕಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕಿಳಿದಿರುವ ಸುರೇಶ್ ಅವರು ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈಗಾಗಲೇ ಭರದಿಂದ ಒಂದಷ್ಟು ಚಿತ್ರೀಕರಣ ನಡೆದಿದೆ. ಮುಖ್ಯ ಭಾಗಗಳ ಇನ್ನೊಂದಿಷ್ಟು ಚಿತ್ರೀಕರಣ ಬಾಕಿ ಇದೆ. ಅದು ಮುಗಿದಾಕ್ಷಣವೇ ಆಡಿಯೋ ರಿಲೀಸ್ ಮಾಡಿ, ಅದರ ಬೆನ್ನಲ್ಲಿಯೇ ಟ್ರೈಲರ್ ಅನ್ನೂ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದಾಗಿದೆ.

ತುಳುವಿನಲ್ಲಿ ಸೂಪರ್‌ ಹಿಟ್‌ ಆಗಿರುವ ಸರ್ಕಸ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್‌ ವ್ಯಾಲೆಂಟೈನ್‌ ಸಾಲ್ಡಾನಾ ‘ಚೋಳ’ ಚಿತ್ರಕ್ಕೂ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article