ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಗಲಿಕೆ ಹಿನ್ನೆಲೆ ನಾಳೆ (ಆಗಸ್ಟ್ 16ರಂದು) ಉತ್ತರಕ್ರಿಯೆ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಸರ್ವರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ. ಸ್ಪಂದನಾ ಉತ್ತರ ಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Advertisement
ಸ್ಪಂದನಾ ಉತ್ತರ ಕ್ರಿಯೆಗೆ (Uttara Kriya) ಭಾಗಿಯಾಗಲು ಸರ್ವರಿಗೂ ಕುಟುಂಬ ಆಹ್ವಾನ ನೀಡಿದ್ದಾರೆ. ಉತ್ತರ ಕ್ರಿಯೆ ಆಗಸ್ಟ್ 16ರ ಬೆಳಿಗ್ಗೆ 8 ಗಂಟೆಯಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನಡೆಯಲಿದೆ. ಮಧ್ಯಾಹ್ನ 12:30ರ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಳ್ಳಲಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:‘ಸಲಾರ್’ ತೆರೆಗೆ ಅಬ್ಬರಿಸಲು ದಿನಗಣನೆ- ಪ್ರಭಾಸ್ ಸಿನಿಮಾದ ಬಿಗ್ ಅಪ್‌ಡೇಟ್
Advertisement
Advertisement
ಸುಮಾರು 4000 ಜನರಿಗೆ ಊಟದ ವ್ಯವಸ್ಥೆಗೆ ಪ್ಲ್ಯಾನ್ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಒಂದೇ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಪಂಕ್ತಿ ಸಿಸ್ಟಮ್ ಇರೋದಿಲ್ಲ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
Advertisement
ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಂಡು, ಮಸಾಲಾ ವಡೆ, ಉದ್ದಿನ ವಡೆ, ಕೋಸುಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ ಇರಲಿದೆ.