ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಎಸಿಬಿ ಸಿಕ್ಕಿಬಿದ್ದಿರುವ ಲೋಕಾಯುಕ್ತದ ಜಡ್ಜ್ ಮೆಂಟ್ ರೈಟರ್ ಸುಂಕಣ್ಣ ಪುರಾಣ ಬಗೆದಷ್ಟು ಬಯಲಾಗ್ತಿದೆ.
ಕಾನ್ಸ್ ಟೇಬಲ್ ಕಲ್ಲೇಶ್‍ಗೆ ಇಟ್ಟ ಲಂಚದ ಡಿಮ್ಯಾಂಡ್ ಹಾಗೂ ಧಮ್ಕಿ ಹಾಕುವ ಆಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಎಸಿಬಿ ಖೆಡ್ಡಾಕ್ಕೆ ಬಿದ್ದಿರುವ ಸುಂಕಣ್ಣ, ಕಲ್ಲೇಶ್‍ರನ್ನು ಲಂಚಕ್ಕಾಗಿ ಯಾವ ರೀತಿ ಪೀಡಿಸುತ್ತಿದ್ದು ಅನ್ನೊದು ಈ ಆಡಿಯೋದಲ್ಲಿದೆ.
Advertisement
Advertisement
ಲೋಕಾಯುಕ್ತ ಸಂಸ್ಥೆಯಲ್ಲಿ ಜಡ್ಜ್ ಮೆಂಟ್ ರೈಟರ್ ಆಗಿದ್ದ ಸುಂಕಣ್ಣ ಗುರುವಾರದಂದು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿದ್ದರು. ಅತ್ತ, ಬಳ್ಳಾರಿಯಲ್ಲಿ ಸುಂಕಣ್ಣನ ಸೂಚನೆ ಮೇರೆಗೆ ಹಣ ಸ್ವೀಕರಿಸುತ್ತಿದ್ದ ಎಪಿಎಂಸಿ ಠಾಣೆ ಪೊಲೀಸ್ ಪೇದೆ ಸುಧಾಕರ್‍ನನ್ನು ಎಸಿಬಿ ಟ್ರ್ಯಾಪ್ ಮಾಡಿದೆ. 2011ರಲ್ಲಿ ಬಳ್ಳಾರಿಯ ಎಪಿಎಂಸಿ ಯಾರ್ಡ್ ಠಾಣೆಯ ಪೇದೆ ಕಲ್ಲೇಶಪ್ಪನನ್ನು ಲೋಕಾಯುಕ್ತ ಟ್ರಾಪ್ ಮಾಡಿತ್ತು. ಬಳ್ಳಾರಿ ಸೆಷನ್ಸ್ ಕೋರ್ಟ್‍ನಲ್ಲಿ ವಿಚಾರಣೆ ನಡೆದು 2015ರಲ್ಲಿ ಕಲ್ಲೇಶಪ್ಪ ಆರೋಪ ಮುಕ್ತರಾಗಿದ್ರು.
Advertisement
Advertisement
ಈ ಪ್ರಕರಣ ಮೇಲ್ಮನವಿ ಸಲ್ಲಿಸಲು ಸಹ ಅರ್ಹವಲ್ಲ ಎಂದು ಲೋಕಾಯುಕ್ತ ಸಂಸ್ಥೆ ಸಹ ವರದಿ ನೀಡಿತ್ತು. ಈ ವರದಿ ನೀಡಲು ತಾನೇ ಕಾರಣ, ಇದಕ್ಕೆ 34 ಸಾವಿರ ಲಂಚ ನೀಡಬೇಕೆಂದು ಜಡ್ಜ್ ಮೆಂಟ್ ರೈಟರ್ ಸುಂಕಣ್ಣ ಬೇಡಿಕೆ ಇಟ್ಟಿದ್ರು. ಕೊನೆಗೆ ಅದು 25 ಸಾವಿರಕ್ಕೆ ಬಂದು ನಿಂತಿತ್ತು. ಈ ಸಂಬಂಧ ಕಲ್ಲೇಶಪ್ಪ ಎಸಿಬಿಗೆ ದೂರು ನೀಡಿದ್ರು. ಸುಂಕಣ್ಣನ ಸೂಚನೆ ಮೇರೆಗೆ ಕಲ್ಲೇಶಪ್ಪನಿಂದ ಎಪಿಎಂಸಿ ಠಾಣೆಯ ಪೇದೆ ಸುಧಾಕರ್ ಲಂಚ ಸ್ವೀಕರಿಸ್ತಿದ್ರು. ಈ ವೇಳೆ, ಎರಡೂ ಕಡೆ ಎಸಿಬಿ ದಾಳಿ ನಡೆಸಿ ಇಬ್ಬರನ್ನು ಖೆಡ್ಡಾಗೆ ಕೆಡವಿದೆ.