ಸಿಎಂ ಹೇಳಿದರೆ ರಾಜೀನಾಮೆ ನೀಡುತ್ತೇನೆ: ಮಾಧುಸ್ವಾಮಿ

Advertisements

ತುಮಕೂರು: ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್‍ಮೆಂಟ್ ಮಾಡುತ್ತಿದ್ದೇವೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಆಡಿಯೋ ಲೀಕ್ ವಿಚಾರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದರು.

Advertisements

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ತುಂಬಾ ಹಳೇಯದು. ಯಾವಾಗ ಮಾತನಾಡಿದ್ದೀನಿ ಅನ್ನೋದು ನನಗೆ ನೆನಪಿಲ್ಲ. ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಆಡಿಯೋ ರೆಕಾರ್ಡಿಂಗ್ ಮಾಡಿದ ವ್ಯಕ್ತಿ ವಿರುದ್ಧ ದೂರು ನೀಡುತ್ತೇನೆ. ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡುವುದು ಕೂಡ ಅಪರಾಧವಾಗಿದೆ. ಹಾಗಾಗಿ ಪ್ರಸಾರ ಮಾಡಿದ ಮಾಧ್ಯಮದ ಮೇಲೂ ಕೇಸ್ ಹಾಕುತ್ತೇನೆ ಎಂದು ತಿಳಿಸಿದರು.

Advertisements

ಅಪರಿಚಿತ ವ್ಯಕ್ತಿಯ ದಾಖಲೆ ಮಾಧ್ಯಮದವರು ನೀಡಲಿ. ಯಾರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡುವುದಿಲ್ಲ. ಈಗಾಗಲೇ ಸಿಎಂಗೆ ಸ್ಪಷ್ಟನೆ ನೀಡಿದ್ದೇನೆ. ರಾಜೀನಾಮೆ ಕೊಡುವ ಪ್ರಮೇಯ ಇಲ್ಲ. ಸಿಎಂ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

ಅನಾಮಿಕ ವ್ಯಕ್ತಿ ನನಗೆ ಪ್ರಚೋದನೆ ನೀಡುತ್ತಿದ್ದ. ಹಾಗಾಗಿ ನಾನು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದೆ. ಸಚಿವ ಸೋಮಶೇಖರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

Advertisements

Live Tv

Advertisements
Exit mobile version