ಬಾಲಿವುಡ್‌ನ (Bollywood) ಪರಮ ಸುಂದರಿ ಕೃತಿ ಸನೋನ್‌ಗೆ(Kriti Sanon) ಬೇಡಿಕೆಯಿದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಚಿತ್ರರಂಗದ ನೆಪೋಟಿಸಂ ಬಗ್ಗೆ ಶಾಕಿಂಗ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ. ನೆಪೋಟಿಸಂ ಬೆಳೆಯಲು ಪ್ರೇಕ್ಷಕರೇ ಕಾರಣ ಎಂದಿದ್ದಾರೆ. ಇದನ್ನೂ ಓದಿ:ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್ ಫೈಟ್
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ನೆಪೋ ಕಿಡ್ ಅಲ್ಲ. ಅವರಿಗೆ ಚಿತ್ರರಂಗದ ಹಿನ್ನೆಲೆ ಇಲ್ಲದೇ ಇದ್ದರೂ, ತಮ್ಮ ಟ್ಯಾಲೆಂಟ್‌ನಿಂದ ಸಕ್ಸಸ್ ಕಂಡಿದ್ದಾರೆ. ನೆಪೋಟಿಸಂಗೆ ಚಿತ್ರರಂಗ ಮಾತ್ರ ಜವಾಬ್ದಾರಿ ಅಲ್ಲ, ಪ್ರೇಕ್ಷಕರು ಕೂಡ ಆಗಿದ್ದಾರೆ. ಕೆಲವು ಸ್ಟಾರ್ ಕಿಡ್‌ಗಳ ಬಗ್ಗೆ ಮಾಧ್ಯಮಗಳು ಎನು ತೋರಿಸುತ್ತವೆಯೋ ಅದನ್ನು ಪ್ರೇಕ್ಷಕರು ನೋಡಲು ಬಯಸುತ್ತಾರೆ. ಅವರ ಆಸಕ್ತಿ, ಅಭಿರುಚಿಯಂತೆ ಸಿನಿಮಾ ಮಾಡಲು ಚಿತ್ರರಂಗ ಬಯಸುತ್ತದೆ ಎಂದಿದ್ದಾರೆ.
ಪ್ರತಿಭಾವಂತರಾಗಿದ್ದರೆ ನೀವು ನಿಮ್ಮ ಕನಸಿನ ಜಾಗಕ್ಕೆ ಬರುತ್ತೀರಿ. ಪ್ರೇಕ್ಷಕರೊಂದಿಗೆ ನೀವು ಸಂಪರ್ಕ ಹೊಂದಿಲ್ಲದಿದ್ದರೆ ಕನಸು ನನಸು ಮಾಡಿಕೊಳ್ಳುವುದು ಕಷ್ಟ ಎಂದಿದ್ದಾರೆ. ಈ ಮೂಲಕ ನೆಪೋಟಿಸಂಗೆ ಪ್ರೇಕ್ಷಕರು ಕಾರಣ ಎಂದು ನಟಿ ಮುಕ್ತವಾಗಿ ಮಾತನಾಡಿದ್ದಾರೆ.
ಇನ್ನೂ ಅಕ್ಷಯ್ ಕುಮಾರ್ ನಟನೆಯ ‘ಹೌಸ್‌ಫುಲ್ 5’ ಮತ್ತು ‘ಭೇದಿಯಾ 2’ ಸಿನಿಮಾದಲ್ಲಿ ಕೃತಿ ಬ್ಯುಸಿಯಾಗಿದ್ದಾರೆ.