ನವದೆಹಲಿ: 2014 ರಲ್ಲಿ ವರ್ಷ ಆಸ್ಟ್ರೇಲಿಯಾ ದೇಶಿಯ ಕ್ರಿಕೆಟ್ ತಂಡದ ಆಟಗಾರರ ಫಿಲಿಪ್ ಹ್ಯೂಸ್ ಮೈದಾನಲ್ಲಿ ಬೌಲರ್ ಎಸೆದ ಬೌನ್ಸರ್ ಗೆ ಬಲಿಯಾದ ದುರಂತ ನೆನಪು ಮಾಸುವ ಮುನ್ನ ಸಂಭವಿಸಬಹುದಾಗಿದ್ದ ಮತ್ತೊಂದು ಭಾರೀ ದುರಂತ ತಪ್ಪಿದೆ.
Advertisement
ಬೌಲರ್ ಎಸೆತವನ್ನು ಸಿಕ್ಸರ್ ಗಟ್ಟುವ ಪ್ರಯತ್ನದಲ್ಲಿ ಬ್ಯಾಟ್ಸ್ ಮನ್ ಹೊಡೆದ ಚೆಂಡು ನೇರವಾಗಿ ಬೌಲರ್ ನ ತಲೆಗೆ ಬಡಿದು ನಂತರ ಸಿಕ್ಸರ್ ಗೆರೆ ದಾಟಿದೆ. ಇಂದು ನ್ಯೂಜಿಲೆಂಡ್‍ನಲ್ಲಿ ದೇಶಿಯ ತಂಡಗಳ ನಡುವೆ ನಡೆಯುತ್ತಿದ್ದ ಫೋರ್ಡ್ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಘಟನೆ ನಡೆದಿದೆ. ಆಕ್ಲೆಂಡ್ ಹಾಗೂ ಕ್ಯಾಂಟರ್ಬರಿ ನಡುವಣ ಪಂದ್ಯದಲ್ಲಿ ಆಂಡ್ರ್ಯೂ ಎಲಿಸ್ ಬೌಲಿಂಗ್ ನಲ್ಲಿ ಜೀತ್ ರವಲ್ ನೇರವಾಗಿ ಹೊಡೆದಿದ್ದಾರೆ. ಚೆಂಡು ನೇರವಾಗಿ ಎಲಿಸ್ ತಲೆಗೆ ಬಡಿದು ನಂತರ ಸಿಕ್ಸರ್ ಗೆರೆ ದಾಟಿದೆ. ಆದರೆ ಘಟನೆಯಲ್ಲಿ ಅದೃಷ್ಟವಶಾತ್ ಎಲಿಸ್ ಅವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
Advertisement
ಚೆಂಡು ಬೌಲರ್ ತಲೆಗೆ ಬಡಿದ ತಕ್ಷಣ ಅವರಿಗೆ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ನಂತರ ಆಂಡ್ರ್ಯೂ ಎಲಿಸ್ ಮತ್ತೆ ಮೈದಾನಕ್ಕೆ ಮರಳಿ ಆಟ ಮುಂದುವರಿಸಿದರು. ಈ ನಡುವೆ ಚೆಂಡು ತಲೆಗೆ ಬಡಿದ ತಕ್ಷಣ ಕ್ರೀಡಾ ಸ್ಫೂರ್ತಿಯನ್ನು ಮೆರೆದ ರವಲ್ ತಕ್ಷಣವೇ ಎಲಿಸ್ ಬಳಿ ತೆರಳಿ ಸ್ವಾರಿ ಕೇಳಿ ಆರೋಗ್ಯ ವಿಚಾರಿಸಿದರು.
Advertisement
https://twitter.com/thenichecache/status/966153850666168321?