ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರ ದಾಳಿ ನಡೆದ (Pahalgam Terrorist Attack) ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರಲ್ಲಿ ಭಯ ಮೂಡಿದೆ. ಹಾಗಾಗಿ ಕಾಶ್ಮೀರಕ್ಕೆ ನಟ ಅತುಲ್ ಕುಲಕರ್ಣಿ (Atul Kulkarni) ಭೇಟಿ ನೀಡಿ ಪ್ರವಾಸಿಗರು ಮತ್ತೆ ಬರುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್
#ChaloKashmir #Feet_in_Kashmir #Kashmiriyat #love_compassion #DefeatTerror pic.twitter.com/0goqybpP9R
— atul kulkarni (@atul_kulkarni) April 27, 2025
ಉಗ್ರರ ದಾಳಿಯ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ನಲ್ಲಿ ಏಪ್ರಿಲ್- ಮೇ ತಿಂಗಳುಗಳಲ್ಲಿ ಕಾಶ್ಮೀರ ಪ್ರವಾಸಿಗರಿಂದ ತುಂಬಿರುತ್ತದೆ. ಆದರೆ ಉಗ್ರರ ದಾಳಿಯ ಬಳಿಕ ವಿಮಾನವೂ ಖಾಲಿ ಇದೆ. ಈ ವಿಮಾನ ಯಾವಾಗಲೂ ತುಂಬಿರುತ್ತಿತ್ತು. ನಾವೀಗ ಮತ್ತೆ ಸ್ಥಾನವನ್ನು ತುಂಬಬೇಕು, ಭಯೋತ್ಪಾದನೆಯನ್ನು ಸೋಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:KD ಚಿತ್ರದ ಸ್ಪೆಷಲ್ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ
हिंदोस्तां की ये जागीर है
के डर से हिम्मत भारी है
हिंदोस्तां की ये जागीर है
के नफ़रत प्यार से हारी है
चलिए जी कश्मीर चलें
सिंधु, झेलम किनार चलें#ChaloKashmir #Feet_in_Kashmir #Kashmiriyat #love_compassion #DefeatTerror pic.twitter.com/ateMnb1Ym4
— atul kulkarni (@atul_kulkarni) April 27, 2025
ಇದು ಹಿಂದೂಸ್ತಾನದ ಭೂಮಿ, ಇಲ್ಲಿ ಭಯಕ್ಕಿಂತ ಧೈರ್ಯವೇ ಹೆಚ್ಚು. ಇದು ಹಿಂದೂಸ್ತಾನದ ಭೂಮಿ, ಇಲ್ಲಿ ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ. ಕಾಶ್ಮೀರಕ್ಕೆ ಹೋಗೋಣ, ನಾನು ಬಂದಿದ್ದೇನೆ ನೀವೂ ಬನ್ನಿ ಎಂದು ಅತುಲ್ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ.
View this post on Instagram
ಬಹುಭಾಷಾ ನಟ ಅತುಲ್ ಕುಲಕರ್ಣಿ ಅವರು ಮೈತ್ರಿ, ಯಕ್ಷ, ಎದೆಗಾರಿಕೆ, ಉಗ್ರಂ, ಅಭಿನೇತ್ರಿ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.