ಬೆಂಗಳೂರು: ಪ್ರಸಿದ್ಧ ಚಿನ್ನದ ವ್ಯಾಪಾರಿ ಅಟ್ಟಿಕಾ ಗೋಲ್ಡ್ (Attica Gold) ಮಾಲೀಕರಾದ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು (Bommanahalli Babu) ಮಹಿಳೆಗೆ ಮೋಸ ಮಾಡಿರುವ ಆರೋಪದಡಿ ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಎರಡನೇ ಮದುವೆಯಾಗಿ ಮೋಸ ಮಾಡಿರುವುದಾಗಿ ಮಹಿಳೆಯೊಬ್ಬರು ಆಂಧ್ರಪ್ರದೇಶದಲ್ಲಿ ಅಟ್ಟಿಕಾ ಬಾಬು ವಿರುದ್ಧ ದೂರು ದಾಖಲಿಸಿದ್ದರು. ಹಾಗಾಗಿ ಬೆಂಗಳೂರಿಗೆ (Bengaluru) ಆಗಮಿಸಿದ ಆಂಧ್ರಪ್ರದೇಶ ಪೊಲೀಸರು ಬಾಬುರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ
ಶೇಕ್ ಮೀನಾಜ್ ಎಂಬಾಕೆಯನ್ನು ಮದುವೆಯಾಗಿದ್ದ ಅಟ್ಟಿಕಾ ಬಾಬು, ಡಿಸೆಂಬರ್ 12 ರಂದು ಯಲ್ಲೂರಿಗೆ ಹೋಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಶೇಕ್ ಮೀನಾಜ್ ಆರೋಪಿಸಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ: ಪೊಲೀಸ್ ನೋಟಿಸ್ ಗೆ ದುನಿಯಾ ವಿಜಯ್ ಉತ್ತರ
ಹಲ್ಲೆಯ ಬಳಿಕ ಅಟ್ಟಿಕಾ ಬಾಬು ವಿರುದ್ಧ ಶೇಕ್ ಮೀನಾಜ್ ಕೊಲೆಗೆ ಯತ್ನ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಯಲ್ಲೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ IPC section 448,342,307,386,427,498A,506 ಮತ್ತು ವರದಕ್ಷಿಣೆ ಕಿರುಕುಳ ಅರೋಪದಡಿ ಕೇಸ್ ದಾಖಲಾಗಿತ್ತು. ಆ ಬಳಿಕ ಯಲ್ಲೂರು ಪೊಲೀಸರು ಬಾಬುರನ್ನು ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ಸಿಸಿಬಿ ಹಾಗೂ ಹೈಗ್ರೌಂಡ್ಸ್ ಪೊಲೀಸರ ಸಹಾಯದಿಂದ ಇಂದು ಅಟ್ಟಿಕಾ ಬಾಬುರನ್ನು ಯಲ್ಲೂರು ಪೊಲೀಸರು ವಶಕ್ಕೆ ಪಡೆದು ಅನಂತಪುರಕ್ಕೆ ಕರೆದೊಯ್ದಿದ್ದರು. ಅಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.