ಬೆಂಗಳೂರು: ಪಟಾಕಿ ದುರಂತದಿಂದ ಗಾಯಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ ಎಂದು ಮೃತ ವೆಂಕಟೇಶ್ (Venkatesh) ಗೆಳೆಯ ಮುರಳಿ ಭಾವುಕರಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಟಾಕಿ ಅಂಗಡಿಗೆ ಬೆಂಕಿ ಹೊರಗಿನಿಂದ ಬಂದಿದ್ದಲ್ಲ. ಗೋಡಾನ್ ಒಳಗಿನಿಂದಲೇ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಸಂಪೂರ್ಣ ಗೋಡಾನ್ ಧಗಧಗ ಹೊತ್ತಿ ಉರಿಯಿತು ಎಂದು ನಡೆದ ಘಟನೆ ವಿವರಿಸಿದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ
Advertisement
Advertisement
ಪಟಾಕಿ ಖರೀದಿಗೆ (Attibele Fire Crackers Tragedy) ನಾನೂ, ವೆಂಕಟೇಶ್ ಹೋಗಿದ್ದೆವು. ಬೆಂಕಿ ಕಂಡ ಕೂಡಲೇ ಹೊರಗೆ ಓಡಿ ಬಂದ್ವಿ. ನಾನು ಎಡಗಡೆ ತಿರುವು ತೆಗೆದುಕೊಂಡೆ, ವೆಂಕಟೇಶ್ ಬಲಗಡೆ ಓಡಿದ. ನಾನು ಬೆಂಕಿಯಿಂದ ಬಚಾವ್ ಆದರೆ, ಆದರೆ ಸ್ನೇಹಿತ ಗಾಯಗೊಂಡ. ಆತನ ಬೆನ್ನಿನ ಭಾಗ ಹೆಚ್ಚಾಗಿ ಸುಟ್ಟಿತ್ತು. ಕೂಡಲೇ ಅವನನ್ನ ಆಸ್ಪತ್ರೆಗೆ ದಾಖಲು ಮಾಡಿದೆ. ದಾರಿಯುದ್ದಕ್ಕೂ ಮಾತನಾಡುತ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡೋ ಚಿತ್ರಗಳನ್ನು ಯಾವತ್ತೂ ನೋಡುತ್ತೇನೆ ಎಂದುಕೊಂಡಿರಲಿಲ್ಲ: ಆಘಾತ ವ್ಯಕ್ತಪಡಿಸಿದ ಬೈಡನ್
Advertisement
Advertisement
ಗೆಳೆಯನಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದರೆ ಬದುಕುತ್ತಿದ್ದ. ಆದರೆ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಮುರಳಿ ಗಂಭೀರ ಆರೋಪ ಮಾಡಿದರು.
Web Stories