ಬೆಳಗಾವಿ: ಕಾನ್‍ಸ್ಟೇಬಲ್ ಪರೀಕ್ಷೆಯಲ್ಲಿ 12 ಜನರು ಅತ್ಯಾಧುನಿಕ ತಂತ್ರಜ್ಞಾನವಾದ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಪ್ರಕರಣದ ತನಿಖೆಯನ್ನು ರಾಜ್ಯ ಗೃಹ ಇಲಾಖೆ ಸಿಐಡಿಗೆ ವಹಿಸಿದೆ.
Advertisement
ಬೆಳಗಾವಿಯಲ್ಲಿ ಅಕ್ಟೋಬರ್ 24ರಂದು ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ವೇಳೆ ರಾಮತೀರ್ಥ ನಗರದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರೀಕ್ಷಾ ಕೊಠಡಿಗಳ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ಪರೀಕ್ಷೆ ವೇಳೆಯಲ್ಲಿ 12 ಜನ ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದು, ಅವರನ್ನು ಪೊಲೀಸರು ಬಂಧಿಸಿದ್ದರು. ಇದರ ಹಿಂದೆ ಇನ್ನೂ ದೊಡ್ಡ ಜಾಲವೇ ಇದೆ ಎಂದು ರಾಜ್ಯ ಗೃಹ ಇಲಾಖೆ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ
Advertisement
Advertisement
ಈ ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿ ಪ್ರಶ್ನೆ ಪತ್ರಿಕೆ ಮಾಹಿತಿಯನ್ನು ತಮ್ಮ ತಂಡಕ್ಕೆ ರವಾನೆ ಮಾಡಿದ್ದು, ಅವರಿಂದ ಉತ್ತರ ಪಡೆದುಕೊಂಡು ಬರೆಯುತ್ತಿದ್ದರು. ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದರು. ಈ ವೇಳೆ 12 ಜನರನ್ನು ಸಿಕ್ಕಿಬಿದ್ದಿದ್ದು, 33 ಮೊಬೈಲ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲೂಟೂತ್, ಮೂರು ಟ್ಯಾಬ್, ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆದುಕೊಂಡಿದ್ದರು.
Advertisement
ಈ ವೇಳೆ ಪೊಲೀಸರು ಇಬ್ಬರು ಪರೀಕ್ಷಾರ್ಥಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಓರ್ವ ಪೊಲೀಸ್ ಪೇದೆ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲು ರಾಜ್ಯ ಗೃಹ ಇಲಾಖೆ ಆದೇಶ ನೀಡಿದ್ದು, ಸರ್ಕಾರ ಪೊಲೀಸ್ ಪೇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನೂ ಓದಿ: ಭೂಚಕ್ರ ಗಡ್ಡೆ ವ್ಯಾಪಾರ ಬಲು ಜೋರು- ಏನಿದರ ವಿಶೇಷ?
ಗೋಕಾಕ್, ಮೂಡಲಗಿ ತಾಲೂಕಿನಲ್ಲಿ ಅನೇಕರ ಬಂಧನದ ಸಾಧ್ಯತೆ ಇದ್ದು, ಈ ಮೂಲಕ ದೊಡ್ಡ ವಂಚನಾ ಜಾಲ ಪತ್ತೆಯಾಗುವ ಸಾಧ್ಯತೆ ಇದೆ.