ಬೆಂಗಳೂರು: ಯುವಕನೊಬ್ಬ ಬರುತ್ತಿದ್ದ ಮೆಟ್ರೋ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ (Jnana Bharathi Metro Station) ನಡೆದಿದೆ.
ಯುವಕನನ್ನು ಬಿಹಾರ (Bihar) ಮೂಲದ 20 ವರ್ಷದ ಶ್ರೀ ಸಿದ್ದಾರ್ಥ್ ಎಂದು ಗುರುತಿಸಲಾಗಿದೆ. ಇಂದು (ಸೆ.17) ಮಧ್ಯಾಹ್ನ 2:15ರ ಸುಮಾರಿಗೆ ಈ ದುರಂತ ಸಂಭವಿಸಿದೆ.ಇದನ್ನೂ ಓದಿ: ದೇಶದಲ್ಲಿ ಅ.1 ರವರೆಗೆ ‘ಬುಲ್ಡೋಜರ್ ಕಾರ್ಯಾಚರಣೆ’ಗೆ ಸುಪ್ರೀಂ ತಡೆ
Advertisement
Advertisement
ಬರುತ್ತಿದ್ದ ಮೆಟ್ರೋ ರೈಲಿನ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ (ETS) ನಿರ್ವಹಿಸಿ, ಸ್ಟೇಷನ್ ಕಂಟ್ರೋಲರ್ ತಂಡದಿಂದ ಯುವಕನನ್ನು ರಕ್ಷಣೆ ಮಾಡಲಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಯುವಕ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
Advertisement
ಸದ್ಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಅಧಿಕಾರಿಗಳ ವಶದಲ್ಲಿರುವ ಯುವಕನಿಂದ ಮಾಹಿತಿ ಪಡೆಯುತ್ತಿದ್ದು, ವಿಚಾರಣೆ ನಡೆಯುತ್ತಿದೆ.
Advertisement
2:13 ರಿಂದ 2:30 ಗಂಟೆಯವರೆಗೆ ಚಲ್ಲಘಟ್ಟ ಮೆಟ್ರೊ ನಿಲ್ದಾಣದ (Challaghatta Metro Station) ಬದಲು ಮೈಸೂರು ರಸ್ತೆಯಲ್ಲಿ (Mysore Road Metro Station) ರೈಲುಗಳು ಶಾರ್ಟ್ ಲೂಪ್‌ನಲ್ಲಿ ಕಾರ್ಯನಿರ್ವಹಿಸಿದವು. ಬಳಿಕ 2:30ರಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ (Purple Line) ರೈಲು ಸೇವೆ ಪುನರಾರಂಭಿಸಲಾಗಿದೆ.ಇದನ್ನೂ ಓದಿ: ಮೋದಿ ಜನ್ಮದಿನದಂದೇ ಜನನ – ಪುತ್ರನಿಗೆ ‘ನರೇಂದ್ರ’ ಎಂದು ಹೆಸರಿಟ್ಟ ಕೊಡಗಿನ ದಂಪತಿ