ಶಿವಮೊಗ್ಗ: ಜಾತಿಗಣತಿ (Caste Census) ಹೆಸರಲ್ಲಿ ಬಂದ ದಂಪತಿ ಸಂಬಂಧಿಕರ ಮನೆಯಲ್ಲೇ ದರೋಡೆಗೆ (Robbery) ಯತ್ನಿಸಿದ ಘಟನೆ ಶಿವಮೊಗ್ಗದ (Shivamogga) ಆಝಾದ್ ನಗರದಲ್ಲಿ ನಡೆದಿದೆ.
ಮುಖ ಮುಚ್ಚಿಕೊಂಡು ಬಂದ ದಂಪತಿ, ಮನೆಯಲ್ಲಿದ್ದ ಮಹಿಳೆ ದಿಲ್ ಶಾದ್ ಅವರಿಗೆ, ನಾವು ಜಾತಿಗಣತಿ ಮಾಡಲು ಬಂದಿದ್ದೇವೆ. ಆಧಾರ್ ಕಾರ್ಡ್ ತನ್ನಿ ಎಂದಿದ್ದಾರೆ. ಬಳಿಕ ಆಧಾರ್ ಕಾರ್ಡ್ ತರಲೆಂದು ಮನೆಯೊಳಗೆ ಹೋದಾಗ ದಂಪತಿ ಏಕಾಏಕಿ ನುಗ್ಗಿ, ಮಹಿಳೆ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ
ಕೂಡಲೇ ದಿಲ್ ಶಾದ್ ಹೊರಗೆ ಓಡಿ ಬಂದು, ಅಕ್ಕಪಕ್ಕದವರನ್ನು ಸೇರಿಸಿದ್ದಾರೆ. ಬಳಿಕ ಇಬ್ಬರನ್ನು ಮನೆಯಲ್ಲೇ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ದರೋಡೆಗೆ ಯತ್ನಿಸಿದ ತಸ್ಲಿಮಾ ಮತ್ತು ಅಸ್ಲಂ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಮಾತಾಡಿರುವ ಹಲ್ಲೆಗೊಳಗಾದ ಮಹಿಳೆ ದಿಲ್ ಶಾದ್, ದರೋಡೆ ಮಾಡಲು ಯತ್ನಿಸಿದವರು ನಮ್ಮ ಸೋಸೆಯ ಸಂಬಂಧಿಗಳು. ಅವರು ಮುಖವನ್ನು ಮುಚ್ಚಿಕೊಂಡಿದ್ದರು. ಹಾಗಾಗಿ ನನಗೆ ಯಾರು ಅಂತ ಗೊತ್ತಾಗಲಿಲ್ಲ. ಬಳಿಕ ಸುತ್ತಮುತ್ತಲಿನ ಜನ ಬಂದು ಬುರ್ಖಾ ಹಾಗೂ ಮಾಸ್ಕ್ ತೆಗಿಸಿ ವಿಚಾರಿಸಿದಾಗ ಗುರುತು ಪತ್ತೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ