ಕಲಬುರಗಿ ಜೈಲಿನೊಳಗೆ ಗುಟ್ಕಾ, ಬೀಡಿ, ಪಾನ್ ಮಸಾಲಾ ಸಾಗಣೆ ಯತ್ನ

Public TV
2 Min Read
attempt to smuggle gutka beedi pan masala inside kalaburagi jail

– ನಿಷೇಧಿತ ವಸ್ತುಗಳಿದ್ದ ಚೆಂಡುಗಳು ಪತ್ತೆ

ಕಲಬುರಗಿ: ಜಿಲ್ಲೆಯ ಸೆಂಟ್ರಲ್ ಜೈಲಿನ ( Kalaburagi Central Jail) ಒಳಗೋಡೆ ಬಳಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿದ್ದು, ಈ ಕುರಿತು ಫರಹತಾಬಾದ್ ( Farhatabad) ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಜೈಲಿನ ಒಳಭಾಗದ ಗೋಡೆಗಳ ಬಳಿ ಚೆಂಡಿನ ಆಕಾರದ ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಉಂಡೆಗಳು ಪತ್ತೆಯಾಗಿದ್ದು, ಈ ಉಂಡೆಗಳಲ್ಲಿ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮಂಗಳೂರಲ್ಲಿ ರೈಲು ಹಳಿ ತಪ್ಪಿಸಲು ಸಂಚು? – ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ದುಷ್ಕರ್ಮಿಗಳು ಪರಾರಿ

ಜೈಲಿನಲ್ಲಿರುವ ಪರಿಚಿತ ಕೈದಿಗಳಿಗೆ ತಲುಪುವಂತೆ ನಿಷೇಧಿತ ವಸ್ತುಗಳನ್ನು ಒಳಗೊಂಡ ಇಂತಹ ಚೆಂಡುಗಳನ್ನು ಕಿಡಿಗೇಡಿಗಳು ಎಸೆದು ಪರಾರಿಯಾಗುವ ರೂಢಿ ಈ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಚೀಲಗಳಿಂದ ಮಾಡಿರುವ ಚೆಂಡುಗಳು ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಇದನ್ನೂ ಓದಿ: ಚಿತ್ರದುರ್ಗ| ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ

ಜೈಲು ಸಿಬ್ಬಂದಿ ಸಂಗೀತಾ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಈ ಚೆಂಡುಗಳನ್ನು ಗಮನಿಸಿದ ಕೂಡಲೆ ಜೈಲಿನ ಅಧೀಕ್ಷಕಿ ಅನಿತಾ ಅವರ ಗಮನಕ್ಕೆ ತಂದಿದ್ದಾರೆ. ನಂತರ ಆ ಚೆಂಡಿನ ಆಕಾರದ ಉಂಡೆಗಳನ್ನು ಬಿಡಿಸಿ ನೋಡಿದಾಗ ಗುಟ್ಕಾ, ಬೀಡಿ ಹಾಗೂ ಪಾನ್ ಮಸಾಲಾ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗುತ್ತಿದ್ದಂತೆಯೇ ತಕ್ಷಣ ಫರಹತಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ. ಇದನ್ನೂ ಓದಿ: ರಾಜಸ್ತಾನ| ಬಸ್-ರಿಕ್ಷಾ ನಡುವೆ ಭೀಕರ ಅಪಘಾತ; 8 ಮಕ್ಕಳು ಸೇರಿ 12 ಮಂದಿ ಸಾವು

ಈಗಾಗಲೇ ಮೊಬೈಲ್ ಬಳಕೆ, ಹನಿಟ್ರ‍್ಯಾಪ್ ಹಾಗೂ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಕೆಲವು ಕೈದಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ವಿದ್ಯಮಾನಗಳು ಇಡೀ ರಾಜ್ಯದ ಗಮನ ಸೆಳೆದ ಬೆನ್ನಲ್ಲಿಯೇ, ಕಾರಾಗೃಹ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಾಗೂ ಅದೇ ಕಚೇರಿಯ ಎಸ್ಪಿ ಯಶೋಧಾ ಕಲಬುರಗಿ ಜೈಲಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಜೈಲರ್‌ಗಳಾದ ಶಹನಾಜ್ ನೀಗೆವಾನ್ ಹಾಗೂ ಪರಮಾನಂದ ಅವರನ್ನು ಅಮಾನತುಗೊಳಿಸಲಾಗಿದೆ. ಹಾಗಾಗಿ, ಇದೀಗ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಜೈಲಿನೊಳಗೆ ಎಸೆಯುವ ಜಾಲದ ಕುರಿತು ಮತ್ತೊಂದು ಸುತ್ತಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

Share This Article