Bengaluru City

ಬೆಂಗ್ಳೂರಲ್ಲಿ ಉದ್ಯಮಿ ತಲೆಗೆ ಗನ್ ಇಟ್ಟು ಫೈರ್ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು

Published

on

Share this

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿಬಂದಿದೆ. ಉದ್ಯಮಿ ಕಾರ್ತಿಕ್ ರೆಡ್ಡಿ ಎಂಬವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾ. 4 ರಂದು ನಗರದ ಹೆಚ್‍ಎಎಲ್ ಬಳಿಯ ಇಸ್ರೋ ಹಿಂದಿನ ಗೇಟ್ ಬಳಿ ಅಮೃತ್ ರೆಡ್ಡಿ, ನಿಶ್ವಂತ್ ರೆಡ್ಡಿ ಸೇರಿ ಮೂವರು ದುಷ್ಕರ್ಮಿಗಳು ಕಾರ್ತಿಕ್ ರೆಡ್ಡಿ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ್ದರು. ತಲೆಗೆ ಗನ್ ಪಾಯಿಂಟ್ ಇಟ್ಟು ಫೈರ್ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗನ್ ಇಟ್ಟ ವ್ಯಕ್ತಿಯನ್ನು ತಳ್ಳಿ ಕಾರ್ತಿಕ್ ಪಾರಾಗಿದ್ದರು.

ಬಳಿಕ ಮೂವರು ದುಷ್ಕರ್ಮಿಗಳು ಕಾರ್ತಿಕ್ ರೆಡ್ಡಿಗೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಾರ್ತಿಕ್ ಹೆಚ್‍ಎಎಲ್ ಠಾಣೆಗೆ ದೂರು ನೀಡಿದ್ದು, ಸದ್ಯ ಮೂವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

 

 

Click to comment

Leave a Reply

Your email address will not be published. Required fields are marked *

Advertisement
Advertisement