ಮೈಸೂರು: ಹೆಣ್ಣು ಮಗುವನ್ನು 14,000 ರೂ.ಗೆ ಮಾರಾಟ ಮಾಡಿರುವ ಆರೋಪವೊಂದು ಮೈಸೂರು (Mysuru) ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ಕೇಳಿಬಂದಿದೆ.
ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಕೂಡ ಹೆಣ್ಣಾದ ಕಾರಣ ಮೂರನೇ ಮಗುವನ್ನ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಮತ್ತೆ ದರ ಏರಿಕೆ ಶಾಕ್ – ಎಸ್ಕಾಂ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಕತ್ತರಿ
ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಹೆಣ್ಣು ಮಗು ಮಾರಾಟ ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್ ಬಾಸ್’ ಖ್ಯಾತಿಯ ಇಶಾನಿ
ಮಗುವನ್ನ ಖರೀದಿ ಮಾಡಿದವರನ್ನು ಸಂಪರ್ಕಿಸಿದಾಗ 14,000 ರೂ.ಗೆ ಮಗು ಮಾರಾಟ ಮಾಡಿರುವುರು ಬೆಳಕಿಗೆ ಬಂದಿದೆ. ನಾವು ನೀಡಿದ ಹಣವನ್ನು ಹಿಂದಿರುಗಿಸಿದರೆ ಮಗು ಕೊಡುವುದಾಗಿ ಮಗು ಖರೀದಿ ಮಾಡಿದವರು ಹೇಳಿದ್ದರು. ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಹೇಳಿ ಮಗುವನ್ನು ವಾಪಸ್ ಪಡೆದುಕೊಂಡಿದ್ದರು. ಇದನ್ನೂ ಓದಿ: 2023-24ನೇ ಸಾಲಿನಲ್ಲಿ ಸಿಎಂ ಹೆಲಿಕಾಪ್ಟರ್ ಪ್ರಯಾಣಕ್ಕೆ 11 ಕೋಟಿ ಹಣ ಖರ್ಚು
ಈವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಮಗುವನ್ನ ಮಾರಾಟ ಮಾಡಿದವರಾಗಲಿ, ಮಧ್ಯವರ್ತಿಯಾಗಲಿ ಅಥವಾ ಖರೀದಿಸಿದವರನ್ನಾಗಲಿ ವಶಕ್ಕೆ ಪಡೆದಿಲ್ಲ. ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಮಗುವನ್ನು ವಾಪಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.