ಬೆಂಗಳೂರು: ಸಚಿವ ರಾಜಣ್ಣ ಪುತ್ರ ರಾಜೇಂದ್ರ (Rajendra Rajanna) ಹತ್ಯೆಗೆ ಯತ್ನ ಪ್ರಕರಣ ತನಿಖೆಯನ್ನು ಕ್ಯಾತಸಂದ್ರ ಪೊಲೀಸರು ಚುರುಕುಗೊಳಿಸಿದ್ದಾರೆ.
ಎಂಎಲ್‌ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೋದಲ್ಲಿ (Audio) ಇಬ್ಬರ ಮಾತಿನ ಸಂಭಾಷಣೆ ಇದ್ದು, ಆ ಸಂಭಾಷಣೆಯ ಬಗ್ಗೆ ಒಂದಿಷ್ಟು ಸ್ಪಷ್ಟನೆ ಸಿಗಬೇಕಿದೆ. ಈಗಾಗಲೇ ರಾಜೇಂದ್ರ ಅವರು ಆರೋಪ ಮಾಡಿದ ಹಾಗೇ ಸೋಮ ಮತ್ತು ಭರತ್ ಮಾತುಕತೆನಾ ಅಂತ ಪರಿಶೀಲನೆ ನಡೆಸ್ತಾ ಇದ್ದಾರೆ. ಇದರ ಜೊತೆಗೆ ಆಡಿಯೋವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು
ಕಳೆದ ಎರಡು ದಿನಗಳ ಹಿಂದೆಯಷ್ಟೇ ಎಂಎಲ್‌ಸಿ ರಾಜೇಂದ್ರ ರಾಜಣ್ಣ ಅವರು, ತನ್ನ ಕೊಲೆಗೆ 70 ಲಕ್ಷ ರೂ.ಗೆ ಸುಪಾರಿ ಕೊಡಲಾಗಿದೆ ಎಂದು ಆರೋಪಿಸಿ ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ್ದರು. 18 ನಿಮಿಗಳ ಆಡಿಯೋ ಸಾಕ್ಷ್ಯದ ಸಹಿತ ಎರಡು ಪುಟಗಳ ದೂರು ನೀಡಿದ್ದರು. ಇದನ್ನೂ ಓದಿ: ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ
ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ. ಅದರಲ್ಲಿ 5 ಲಕ್ಷ ಮುಂಗಡ ಪಾವತಿ ಮಾಡಿದ್ದಾರೆ. ಸೋಮ ಮತ್ತು ಭರತ್ ಅನ್ನೋರು ಇದರಲ್ಲಿದ್ದಾರೆ. ನನ್ನ ವಾಹನಕ್ಕೆ ಜಿಪಿಎಸ್ (GPS) ಅಳವಡಿಸಿ ಚಲನ ವಲನ ತಿಳಿಯಲು ಪ್ರಯತ್ನ ಪಟ್ಟಿದ್ದರು. ಹೀಗಾಗಿ ನನಗೆ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದೇನೆ. ಸುಪಾರಿ ಟೀಂ ನಲ್ಲಿ 20 ಜನ ಇದ್ದಾರೆ. 18 ನಿಮಿಷದ ಆಡಿಯೋ ಇದೆ ಎಂದು ರಾಜೇಂದ್ರ ರಾಜಣ್ಣ ಆರೋಪಿಸಿದ್ದರು. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್