ಬಳ್ಳಾರಿ: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆದ್ದ ಬೆನ್ನಲ್ಲೇ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಆರೋಪದ ಬೆನ್ನಲ್ಲೇ ಸೈಯದ್ ನಾಸಿರ್ ಹುಸೇನ್ ಅವರ ಬಳ್ಳಾರಿಯ ಕಚೇರಿಯ ಮುಂದೆ ಭಾರೀ ಹೈಡ್ರಾಮಾ ನಡೆಯಿತು.
ಪಾಕ್ ಪರವಾಗಿ ಘೋಷಣೆ ಕೂಗಿದ ಆರೋಪ ಹಿನ್ನೆಲೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು (BJP Activist) ಬಳ್ಳಾರಿಯ ಮೋತಿ ಸರ್ಕಲ್ ಬಳಿಯ ಬೂಡಾ ಕಚೇರಿಯ ಆವರಣದಲ್ಲಿರುವ ನಾಸಿರ್ ಹುಸೇನ್ (Syed Naseer Hussain) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Advertisement
Advertisement
ಕಚೇರಿ ಮುಂದೆ ಹಾಕಿದ್ದ ನಾಮಫಲಕ ಕಿತ್ತು ಹಾಕಲು ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದು, ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ರೆ ಕಾನೂನು ಕ್ರಮ: ಜಿ.ಪರಮೇಶ್ವರ್