ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಕುಳಿತು ‘ಆದಿಪುರುಷ್‌’ ಚಿತ್ರ ನೋಡಿದ ವ್ಯಕ್ತಿಗೆ ಬಿತ್ತು ಪೆಟ್ಟು

Public TV
2 Min Read
adipurush 1

ಪ್ರಭಾಸ್- ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಜೂನ್ 16ರಂದು ರಿಲೀಸ್ ಆಗಿದೆ. ನೆಚ್ಚಿನ ನಟ ಪ್ರಭಾಸ್ ನಟನೆಯ ಬಿಡುಗಡೆಯ ಸಂಭ್ರಮದ ನಡುವೆ ಅಹಿತಕರ ಘಟನೆವೊಂದು ನಡೆದಿದೆ. ಚಿತ್ರಮಂದಿರದಲ್ಲಿ ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಆದಿಪುರುಷ್ ಚಿತ್ರ ವೀಕ್ಷಣೆ ಮಾಡಿದ್ದಕ್ಕಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.‌ ಇದನ್ನೂ ಓದಿ:ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ತಡೆದದ್ದು ಸಿಎಂ ಸಿದ್ದು : ಪ್ರತಾಪ್ ಸಿಂಹ ಹೊಸ ಬಾಂಬ್

adipurush

ಬಾಹುಬಲಿ ಪ್ರಭಾಸ್ (Prabhas) , ಕೃತಿ ಅಭಿನಯದ ‘ಆದಿಪುರುಷ್’ (Adipurush) ಚಿತ್ರ ಕೊನೆಗೂ ತೆರೆಗೆ ಅಪ್ಪಳಿಸಿದೆ. ರಾಮಾಯಣ ಆಧಾರಿತ ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ನಟಿಸಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಕಳಪೆ ವಿಎಕ್ಸ್ಎಫ್ ಎಂದು ಕಿಡಿಕಾರಿದ್ದಾರೆ. ಪ್ರತಿ ಚಿತ್ರಮಂದಿರದಲ್ಲೂ ಆಂಜನೇಯನಿಗಾಗಿ ಒಂದು ಸೀಟ್‌ನ ಮೀಸಲಿಡಲಾಗಿತ್ತು. ಅಭಿಮಾನಿಯೊಬ್ಬ ಖಾಲಿ ಬಿಟ್ಟಿದ್ದ ಸೀಟ್‌ನಲ್ಲಿ ಆದಿಪುರುಷ್ ಸಿನಿಮಾ ನೋಡಿದ್ದಾನೆ, ಇದನ್ನ ನೋಡಿದ ಇತರೆ ಅಭಿಮಾನಿಗಳು ಆ ವ್ಯಕ್ತಿಗೆ ಥಳಿಸಿದ್ದಾರೆ.

ಪ್ರಭಾಸ್ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಟೆಕೆಟ್ ಸಿಗದೆ ಪರದಾಡುತ್ತಿದ್ದಾರೆ. ಚಿತ್ರಮಂದಿರಗಳು ತುಂಬಿದ ಕಾರಣ ಆಂಜನೇಯನಿಗೆ ಮೀಸಲಿಟ್ಟ ಆಸನದ ಮೇಲೆ ಕುಳಿತಿದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಹೈದರಾಬಾದ್‌ನ ಭ್ರಮರಾಂಬ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಚಿತ್ರಮಂದಿರ ಹೌಸ್‌ಫುಲ್ ಇದ್ದಿದ್ದರಿಂದ ವ್ಯಕ್ತಿಯರ‍್ವ ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತಿದ್ದಾನೆ. ಇದನ್ನು ಸಹಿಸದ ಉಳಿದವರು ಆತನಮೇಲೆ ದಾಳಿ ಮಾಡಲಾಗಿದೆ. ಕೆಲವರು ಈ ಹಲ್ಲೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

ರಾಮನ ಆರಾಧನೆ ನಡೆದರೆ ಆ ಸ್ಥಳದಲ್ಲಿ ಆಂಜನೇಯ (Anjaneya) ಬರುತ್ತಾನೆ ಎಂಬುದು ಭಕ್ತರ ನಂಬಿಕೆ. ಆ ನಂಬಿಕೆ ಚಿತ್ರತಂಡಕ್ಕೂ ಇತ್ತು. ಹಾಗಾಗಿ ಪ್ರತಿ ಚಿತ್ರಮಂದಿರದಲ್ಲೂ ಒಂದು ಸೀಟ್ ಖಾಲಿ ಬೀಡಲಾಗಿತ್ತು. ಈ ಬಗ್ಗೆ ಹಿಂದೆಯೇ ಚಿತ್ರದ ನಿರ್ದೇಶಕ ಓಂ ರಾವತ್ ಹೇಳಿದ್ದರು.

Share This Article