ಬೆಂಗಳೂರು: ಬಂದ್ (Bengaluru Bandh) ವೇಳೆ ಹೋಟೆಲ್ ತೆರೆದಿದ್ದಕ್ಕೆ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಎಂಟಕ್ಕೂ ಹೆಚ್ಚು ಹೋರಾಟಗಾರರು ಹಲ್ಲೆ ನಡೆಸಿರುವ ಪ್ರಕರಣ ಜಯನಗರದಲ್ಲಿ (Jayanagara) ನಡೆದಿದೆ.
ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವುದನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಈ ವೇಳೆ ಬಹುತೇಕ ಅಂಗಡಿಗಳು, ಮಾಲ್ ಹಾಗೂ ಹೋಟೆಲ್‍ಗಳು ಮುಚ್ಚಿದ್ದವು. ಆದರೆ ಜಯನಗರದ ಮೂರನೇ ಹಂತದಲ್ಲಿ ಹೋಟೆಲ್‍ನ್ನು ತೆರದಿದ್ದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‍ಗೆ ಬೈಕ್‍ನಲ್ಲಿ ಬಂದಿದ್ದ ಹೋರಾಟಗಾರರು ಏಕಾಏಕಿ ಒಳಗೆ ನುಗ್ಗಿದ್ದಾರೆ. ಬಳಿಕ ಚೇರ್ ಹಾಗೂ ಗ್ಲಾಸ್‍ಗಳನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ಬಂದ್ ಶಾಂತಿಯುತವಾಗಿ ಆಗಿದೆ, ಬೆಂಗಳೂರು ನಾಗರಿಕರಿಗೆ ಅಭಿನಂದನೆ: ಡಿಕೆಶಿ
Advertisement
Advertisement
ಈ ವೇಳೆ ಹೋಟೆಲ್‍ನಲ್ಲಿದ್ದ ಸಿಬ್ಬಂದಿ ಹೋರಾಟಗಾರರ ಕೃತ್ಯವನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಇದರಿಂದ ಕೆರಳಿದ ಗುಂಪು ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ಸಿಬ್ಬಂದಿ ಹೋಟೆಲ್‍ನ್ನು ಮುಚ್ಚಿದ್ದಾರೆ.
Advertisement
Advertisement
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು
Web Stories