ರಾಯಚೂರು: ಚುನಾವಣೆ ವೇಳೆ ಖರ್ಚಿಗೆ ಕೊಟ್ಟಿದ್ದ ಹಣ ವಾಪಸ್ ಕೊಟ್ಟಿಲ್ಲ ಎಂದು ಜೆಡಿಎಸ್ (JDS) ಮುಖಂಡನೊಬ್ಬ ಯುವ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರಿನ (Raichur) ದೇವದುರ್ಗದ ಆಲ್ಕೋಡ್ ಗ್ರಾಮದಲ್ಲಿ ನಡೆದಿದೆ.
ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಬೆಂಬಲಿಗ ಹಾಗೂ ಜೆಡಿಎಸ್ ಮುಖಂಡ ವಿಶ್ವನಾಥ್ ಪಾಟೀಲ್ ತನ್ನ ಸಂಬಂಧಿ ಚನ್ನಪ್ಪಗೌಡ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆ ಹಾಗೂ ಗಲಾಟೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾಸಕಿ ಕರೆಮ್ಮ ನಾಯಕ್ ಪರವಾಗಿ ಚುನಾವಣೆ ಖರ್ಚಿಗೆ ವಿಶ್ವನಾಥ್ ಪಾಟೀಲ್ 3 ಲಕ್ಷ 20 ಸಾವಿರ ರೂ. ಹಣ ಕೊಟ್ಟಿದ್ದ ಎನ್ನಲಾಗಿದೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ತಡೆ – ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಲು ಸುಪ್ರೀಂ ನಿರ್ದೇಶನ
Advertisement
Advertisement
ಆಲ್ಕೋಡ್ ಪಂಚಾಯತ್ ವ್ಯಾಪ್ತಿಯಲ್ಲಿ ಖರ್ಚು ಮಾಡಲು ಕೊಟ್ಟಿದ್ದ ಪಾರ್ಟಿ ಫಂಡ್‍ನ್ನ ಚುನಾವಣೆ ಬಳಿಕ ಬಡ್ಡಿ ಸಮೇತ ವಾಪಸ್ ಕೊಡುವಂತೆ ಜಗಳ ತೆಗೆದಿದ್ದಾನೆ. ಇದಕ್ಕೆ ಚನ್ನಪ್ಪಗೌಡ ಹಣ ಮರಳಿಸಲು 2 ತಿಂಗಳು ಕಾಲಾವಕಾಶ ಕೇಳಿದ್ದ. ಈಗ 2 ತಿಂಗಳು ತಡವಾಗಿದಕ್ಕೆ ಮನೆಗೆ ಬೆಂಬಲಿಗರನ್ನು ಕರೆದೊಯ್ದು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
Advertisement
Advertisement
ಈ ಸಂಬಂಧ ವಿಶ್ವನಾಥ್ ಪಾಟೀಲ್ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್ – ನೂಕುನುಗ್ಗಲು, ಎದ್ನೋ ಬಿದ್ನೋ ಓಡಿದ ಮಹಿಳೆಯರು