– ಹಲ್ಲೆ ನಡೆಸಿ ಆರೋಪಿಯನ್ನು ಬಿಡಿಸಿಕೊಂಡು ಹೋದ ದುಷ್ಕರ್ಮಿಗಳು
ಗದಗ: ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಪೊಲೀಸರ (Police) ಮೇಲೆಯೇ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿದ ಘಟನೆ ಗದಗದಲ್ಲಿ (Gadag) ನಡೆದಿದೆ.
Advertisement
ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಅಮ್ಜಾದ್ ಅಲಿ ಇರಾನಿ ಎಂಬ ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಗದಗ ರೈಲ್ವೆ ಬ್ರಿಡ್ಜ್ ಬಳಿ ಪೊಲೀಸ್ ವಾಹನ ಅಡ್ಡಗಟ್ಟಿದ್ದಾರೆ. ಬಳಿಕ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ. 392 ಕೇಸ್‌ನಲ್ಲಿ ಆರೋಪಿ ಅಮ್ಜದ್ ಅಲಿ ಗಂಗಾವತಿ ಶಹರ ಪೊಲೀಸರಿಗೆ ಬೇಕಿದ್ದ. ಈ ವೇಳೆ ಬಂದ ದುಷ್ಕರ್ಮಿಗಳು ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಆರೋಪಿಯನ್ನು ಬಿಡಿಸಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಾಲು ಮಾರಾಟ – ಗ್ರಾಹಕರು ದೂರು ನೀಡಿದ್ರೆ ಲೈಸನ್ಸ್ ರದ್ದು?
Advertisement
Advertisement
ದುಷ್ಕರ್ಮಿಗಳು ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳು ಪೊಲೀಸರನ್ನು ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಗೆ ಎಸ್.ಪಿ, ಬಿ.ಎಸ್ ನೇಮಗೌಡ, ಡಿವೈಎಸ್ಪಿ ಭೇಟಿ ನೀಡಿ ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್, ಬೈಕ್ ಮಧ್ಯೆ ಅಪಘಾತ – ಮೂವರು ಸವಾರರು ದುರ್ಮರಣ
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಬಿಎಸ್ ನೇಮಗೌಡ, ಗಂಗಾವತಿ ಶಹರ ಪೊಲೀಸರಿಗೆ ಬೇಕಾದ ಅಪರಾಧಿಯನ್ನು ಪೊಲೀಸರು ವಶಕ್ಕೆ ಪಡೆಯಲು ಬಂದಿದ್ದರು. ವಶಕ್ಕೆ ತೆಗೆದುಕೊಂಡು ಹೋಗುವಾಗ ಆರೋಪಿಯ ಹಿಂಬಾಲಕರು ಬಂದಿದ್ದಾರೆ. ಪೊಲೀಸ್ ವಾಹನದ ಮೇಲೆ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿ ಎಸ್ಕೇಪ್ ಆಗಲು ಅವನ ಹಿಂಬಾಲಕರು ಸಹಾಯ ಮಾಡಿದ್ದಾರೆ. ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗಾವತಿ ಪೊಲೀಸರು ಕೊಟ್ಟ ದೂರಿನ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಷ್ಟು ಜನ ಬಂದು ಅಟ್ಯಾಕ್ ಮಾಡಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತನಿಖೆ ವೇಳೆ ಎಲ್ಲಾ ವಿಷಯ ಪ್ರಸ್ತಾಪಿಸಲಾಗುವುದಿಲ್ಲ. ಗಂಗಾವತಿ ಪೊಲೀಸರು ಬಂದಿರುವ ಬಗ್ಗೆ ನಮಗೆ ಮಾಹಿತಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ; ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಹಣಾಹಣಿ
ಕಾರ್ ಗ್ಲಾಸ್ ಒಡೆದು, ಡೋರ್ ಓಪನ್ ಮಾಡಿ ಆರೋಪಿ ಕರೆದೊಯ್ದಿದ್ದಾರೆ. ಗ್ಯಾಂಗ್ ಯಾರು? ಎಷ್ಟು ಜನ ಇದ್ದರು ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆರೋಪಿ ಸಿಕ್ಕ ನಂತರ ಕರೆದುಕೊಂಡು ಗ್ರಾಮೀಣ ಪೊಲೀಸ್ ಠಾಣೆಗೆ ಕರೆ ತರುತ್ತಿದ್ದರು. ಪೊಲೀಸ್ ಠಾಣೆಗೆ ಬರುವ ವೇಳೆ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಕಾನೂನಿನ ಭಯ ಇಲ್ಲಾ. ಇದು ದಿಢೀರ್ ನಡೆದ ಘಟನೆ. ಕಾನೂನು ಭಯ ಪ್ರಶ್ನೆಯೇ ಇಲ್ಲ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕಾನೂನಿನ ಭಯ ಅವರಿಗೆ ಹೇಗೆ ಮುಟ್ಟಿಸಬೇಕು ಹಾಗೆ ಮುಟ್ಟಿಸುತ್ತೇವೆ. ಕಾನೂನು ಭಯ ಎಷ್ಟು ಇಡಬೇಕು, ಅಷ್ಟು ಇಡುವ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಇದನ್ನೂ ಓದಿ: ಗೂಗಲ್ ಟ್ರಾನ್ಸ್‌ಲೇಟ್‌ಗೆ ಸೇರ್ಪಡೆ ಆಯ್ತು ತುಳು!