ಕಾರವಾರ: ಬೆಳಗಾವಿಯಿಂದ (Belagavi) ಬರುತ್ತಿದ್ದ ಅಡಕೆ ವ್ಯಾಪಾರಿಯ ಕಾರನ್ನು (Car) ಅಡ್ಡಗಟ್ಟಿ, ಆತನ ಮೇಲೆ ಹಲ್ಲೆ ನಡೆಸಿ, 50 ಲಕ್ಷ ರೂ.ವನ್ನು ದರೋಡೆ ಮಾಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನ ಬನವಾಸಿಯಲ್ಲಿ ನಡೆದಿದೆ.
ಸಿದ್ದಾಪುರ ಮೂಲದ ಜಾವಿದ್ ಖಾನ್ ಎಂಬಾತ ಬೆಳಗಾವಿಯಿಂದ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಜಾವಿದ್ ಖಾನ್ ಜಮೀನು ಖರೀದಿಸಲೆಂದು ಬೆಳಗಾವಿಗೆ ತೆರಳಿದ್ದ. ಈ ಹಿನ್ನೆಲೆಯಲ್ಲಿ 50 ಲಕ್ಷ ರೂ. ಹಣವನ್ನು (Money) ತೆಗೆದುಕೊಂಡು ಹೋಗಿದ್ದ. ಆದರೆ ವ್ಯವಹಾರ ಕುದರದ ಕಾರಣ ಮರಳಿ ಮುಂಡಗೋಡು ಭಾಗದಿಂದ ದಾಸನಕೊಪ್ಪ, ಬನವಾಸಿ ಮಾರ್ಗವಾಗಿ ಸಿದ್ದಾಪುರಕ್ಕೆ ಹೊರಟಿದ್ದ. ಇದನ್ನೂ ಓದಿ: MSRTC ಸಾರಿಗೆ ನೌಕರರಿಗೆ ದೀಪಾವಳಿ ಗಿಫ್ಟ್ – 5,000 ರೂ. ಬೋನಸ್
Advertisement
Advertisement
ಈ ವೇಳೆ ಐದು ಜನರಿದ್ದ ಗುಂಪೊಂದು ರಿಡ್ಜ್ ಕಾರಿನಲ್ಲಿ ಬರುತ್ತಿದ್ದ ಜಾವಿದ್ ಖಾನ್‍ನನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಹೆದರಿಸಿದ್ದಾರೆ. ಅಷ್ಟೇ ಅಲ್ಲದೇ, ಕಾರಿನ ಟೈರ್‍ನನ್ನು ಚಾಕುವಿನಿಂದ ಇರಿದು ಪಂಚರ್ ಮಾಡಿದ್ದಾರೆ. ನಂತರ ಜಾವಿದ್‍ಗೆ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಕಾರಿನಲ್ಲಿದ್ದ 50 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಸ್ಲಿಮರು ರಾಮ ಮಂದಿರ ಧ್ವಂಸ ಮಾಡುವ ಕನಸನ್ನು ಕಾಣಬೇಡಿ: ಪ್ರಮೋದ್ ಮುತಾಲಿಕ್