ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ (Khalistan Terrorists) ಗುರ್ಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಭಾರತೀಯ ಸಂಸತ್ತಿನ (Parliament) ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿರುವ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ.
ಪನ್ನುನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ 2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಪೋಸ್ಟರ್ ಕಂಡುಬಂದಿದೆ. ಅದರಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ (ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ) ಎಂಬ ಶೀರ್ಷಿಯನ್ನೂ ನೀಡಲಾಗಿದೆ. ವೀಡಿಯೋದಲ್ಲಿ ಪನ್ನುನ್, ಭಾರತ ತನ್ನನ್ನು ಕೊಲ್ಲಲು ನಡೆಸಿದ ಸಂಚು ವಿಫಲವಾಗಿದೆ. ಅಲ್ಲದೇ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿ ಡಿಸೆಂಬರ್ 13ಕ್ಕೆ 22 ವರ್ಷಗಳಾಗುತ್ತದೆ. ಇದೇ ದಿನ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು. ಇಲ್ಲವೇ ಅದಕ್ಕೂ ಮೊದಲೇ ದಾಳಿ ನಡೆಸುವುದಾಗಿ ಹೇಳಿಕೆ ನೀಡಿದ್ದಾನೆ.
Advertisement
Advertisement
ಪ್ರಸ್ತುತ ಸೋಮವಾರದಿಂದ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್ 22 ರವರೆಗೆ ಅಧಿವೇಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಪನ್ನುನ್ ಬೆದರಿಕೆ ಕರೆ (Threat Call) ಬಂದಿದ್ದು, ಈ ಹಿನ್ನೆಲೆ ಸಂಸತ್ ಭವನದ ಸುತ್ತ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿವೆ. ಇದನ್ನೂ ಓದಿ: ರಜಪೂತ್ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ
Advertisement
ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನ ಕೆ-2 (ಕಾಶ್ಮೀರ-ಖಾಲಿಸ್ತಾನ್) ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್‌ಗೆ ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದೆ.
Advertisement
ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮೂಲದ ಸಿಖ್ ಫಾರಿ ಜಸ್ಟಿಸ್‌ನ (ಎಸ್‌ಎಫ್‌ಜೆ) ಮುಖ್ಯಸ್ಥನಾಗಿದ್ದಾನೆ. ಮಾತ್ರವಲ್ಲದೇ ಭಾರತೀಯ ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ. ಇದನ್ನೂ ಓದಿ: ಮಹಾಪರಿನಿರ್ವಾಣ ದಿನ ಆಚರಣೆ – ಅಂಬೇಡ್ಕರ್ ಭಾವ ಚಿತ್ರಕ್ಕೆ ತಲೆಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ