ನವದೆಹಲಿ: ಮಾರ್ಚ್ 19 ರಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ (Indian High Commission in London) ಎದುರು ಖಲಿಸ್ತಾನಿ (Khalistan) ಬೆಂಬಲಿಗರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಸಿ, ಯುಎಪಿಎ ಮತ್ತು ಪಿಡಿಪಿಪಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ದೆಹಲಿ ಪೊಲೀಸರಿಗೆ ಸೂಚಿಸಿದ್ದು, ಈ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
Advertisement
Advertisement
ದೆಹಲಿ ಪೊಲೀಸರ ವಿಶೇಷ ತಂಡ ಈ ಪ್ರಕರಣದ ತನಿಖೆಯನ್ನು ಆರಂಭಿಸಿದೆ. ವಿದೇಶದಲ್ಲಿ ಭಾರತೀಯ ರಾಷ್ಟ್ರೀಯತೆಯನ್ನು ಹೊಂದಿರುವ ಕೆಲ ವ್ಯಕ್ತಿಗಳೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿರುವ ಕಾರಣ ವಿಶೇಷ ತಂಡ ತನಿಖೆಯನ್ನು ಪ್ರಾರಂಭಿಸಿದೆ.
Advertisement
ಮಾರ್ಚ್ 19ರಂದು ಖಲಿಸ್ತಾನಿ ಬೆಂಬಲಿಗರ ಗುಂಪು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಬಳಿ ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್ ಸಿಂಗ್‌ನ ಪರ ಪೋಸ್ಟರ್ ಹಾಗೂ ಧ್ವಜಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೋವೊಂದರಲ್ಲಿ ಕಿಡಿಗೇಡಿಗಳು ಹೈಕಮಿಷನ್‌ನ ಗೋಡೆಯನ್ನು ಹತ್ತಿ ಭಾರತದ ಧ್ವಜವನ್ನು ಉರುಳಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: 12 ಗಂಟೆಗೊಮ್ಮೆ ಸ್ಥಳ ಬದಲಾವಣೆ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಅಮೃತ್‌ಪಾಲ್ ಸಿಂಗ್
Advertisement
ಭಾರತಕ್ಕೆ ವಿರೋಧವಾಗಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹತೋಟಿಗೆ ತರಲು ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು. ಆದರೂ ಖಲಿಸ್ತಾನಿ ಬೆಂಬಲಿಗರು ಖಲಿಸ್ತಾನ ಜಿಂದಾಬಾದ್, ಭಾರತ ಸರ್ಕಾರ ನಾಚಿಕೆಗೇಡು ಎಂದು ಘೋಷಣೆ ಕೂಗಿದ್ದಾರೆ.
ಭಾರತೀಯ ಹೈಕಮಿಷನ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯದ ಬಳಿಕ ಭಾರತದಲ್ಲಿನ ಬ್ರಿಟನ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಘಟನೆಗಳನ್ನು ಖಂಡಿಸಿದ್ದಾರೆ. ಭಾರತೀಯ ಹೈಕಮಿಷನ್‌ನ ಆವರಣದಲ್ಲಿ ಅವಮಾನಕರ ಕೃತ್ಯಗಳನ್ನು ಎಸಗಿರುವುದನ್ನು ನಾನು ಖಂಡಿಸುತ್ತೇನೆ. ಇದು ಸಂಪೂರ್ಣ ಸ್ವೀಕಾರಾರ್ಹವಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ