ಚಿಕ್ಕಮಗಳೂರು: ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಘಟನೆ ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.
ಕಳೆದ ಒಂದೂವರೆ ತಿಂಗಳಿಂದಲೂ ಚಿಕ್ಕಮಗಳೂರು ನಗರದಲ್ಲಿ ಅಕ್ರಮ ಗೋಹತ್ಯೆ ಕೇಂದ್ರಗಳ ಮೇಲೆ ನಗರಸಭೆ ದಾಳಿ ಮಾಡುತ್ತಿದೆ. ಮೂರಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಕೇಂದ್ರಗಳ ಮೇಲೆ ಬುಲ್ಡೋಜರ್ ಪ್ರಯೋಗ ಕೂಡ ಮಾಡಿದ್ದರು. ಜೊತೆಗೆ 20ಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಮನೆಗಳ ಮೇಲೆ ದಾಳಿ ಮಾಡಿ ಮನೆಯ ಗೋಡೆಗಳಿಗೆ ನೋಟಿಸ್ ಕೂಡ ಅಂಟಿಸಿದ್ದರು. ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವೀಡಿಯೋ ಶೇರ್ ಮಾಡಿದ ರಷ್ಯಾ
Advertisement
Advertisement
ಗೋಹತ್ಯೆ ನಿಲ್ಲಿಸದ ಹಿನ್ನೆಲೆ ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಪೊಲೀಸರು ನಗರದ ತಮಿಳು ಕಾಲೋನಿಯಲ್ಲಿ ಯಶ್ ಪಾಲ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅಕ್ರಮ ಗೋಮಾಂಸವನ್ನ ವಶಪಡಿಸಿಕೊಂಡಿದ್ದಾರೆ. ಆದರೆ, ಮನೆಯ ಮಾಲೀಕ ಯಶ್ ಪಾಲ್ ನಾಪತ್ತೆಯಾಗಿರುವ ಹಿನ್ನೆಲೆ ನಗರಸಭೆ ಅಧ್ಯಕ್ಷರ ಸೂಚನೆ ಮೇರೆಗೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದ್ದಾರೆ.
Advertisement
Advertisement
ಮನೆಯ ನೀರಿನ ಸಂಪರ್ಕವನ್ನ ಕಡಿತಗೊಳಿಸಲು ನೀರಿನ ಸಂಪರ್ಕವಿರಲಿಲ್ಲ. ಹಾಗಾಗಿ, ವಿದ್ಯುತ್ ಸಂಪರ್ಕವನ್ನಷ್ಟೆ ಕಡಿತಗೊಳಿಸಿದ್ದಾರೆ. ನಾಪತ್ತೆಯಾಗಿರುವ ಯಶ್ ಪಾಲ್ ನಮ್ಮ ವಶಕ್ಕೆ ಬರದಿದ್ರೆ ಮನೆಯನ್ನೇ ನಗರಸಭೆ ಆಸ್ತಿ ಎಂದು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ