ಶಿವಮೊಗ್ಗ: ಖಬರಸ್ಥಾನದಲ್ಲಿದ್ದ ಮರ ಕಡಿದಿದ್ದಕ್ಕೆ ಅನ್ಯಕೋಮಿನವರು, ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ (Bhadravathi) ಜಂಬರಗಟ್ಟಿ ಗ್ರಾಮದಲ್ಲಿ ನಡೆದಿದೆ.
ರವಿ ಎಂಬ ಯುವಕ ಮರ ಕಡಿದಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ. ಇದೀಗ ಹಲ್ಲೆ ಖಂಡಿಸಿ ಹೊಳೆಹೊನ್ನೂರು ಪೊಲೀಸ್ (Police) ಠಾಣೆ ಎದುರು ಜಮಾಯಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮರ ಕಡಿದಿದ್ದಕ್ಕೆ ಕ್ಷಮೆ ಕೇಳಿದ್ದೇವೆ. ಅಷ್ಟಾದರೂ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೋದಿ ಪೋಸ್ಟರ್ ವಿರೂಪ – ಮಹಾರಾಷ್ಟ್ರದ ಯುವ ಮೋರ್ಚಾ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್
ಹಲ್ಲೆ ನಡೆಸಿದವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದರೂ ಸಹ ಗ್ರಾಮಸ್ಥರು ಒಪ್ಪದೇ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ