ಹಾವೇರಿ: ದೇವಸ್ಥಾನ ಪ್ರವೇಶದ ಮಾಡಿದರೆಂಬ ಕಾರಣಕ್ಕೆ ದಲಿತ (Assault On Dalith at Haveri) ಸಮುದಾಯದ ತಾಯಿ-ಮಗನ ಮೇಲೆ ಸವರ್ಣಿಯರು ಹಲ್ಲೆ ಮಾಡಿದ ಘಟನೆ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿಯಲ್ಲಿ ನಡೆದಿದೆ. ಇದು ಇಷ್ಟಕ್ಕೆ ನಿಲ್ಲದೇ, ದಲಿತರ ಮನೆಗಳ ಮೇಲೆ ಕಲ್ಲು ತೂರಿ, ಬೈಕ್ ಜಖಂ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಗಳಿಗೆ ಬೆಂಕಿ ಹಚ್ಚಲು ಮೇಲ್ವರ್ಗದ ಮಂದಿ ಪ್ರಯತ್ನಿಸಿದ್ದಾರೆ.
Advertisement
ಬಸವೇಶ್ವರ ಜಾತ್ರೆ (Basaveshwara Jathre) ಯಲ್ಲಿ ದೇವರ ಮೆರವಣಿಗೆಯನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಮಾಡಲಾಯಿತು. ಮೆರವಣಿಗೆಯಲ್ಲಿ ದಲಿತರು ಭಾಗವಹಿಸಿ ಮೇಲ್ದರ್ಜೆಯ ಜನರ ಜೊತೆಗೆ ಕುಣಿಯಲು ಹೋದಾಗ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಎರಡು ಸಮುದಾಯದವರು ದೊಣ್ಣೆ, ಕಲ್ಲು, ಬಡಿಗೆ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಗ್ರಾಮದ ಅಂಬೇಡ್ಕರ್ ಬ್ಯಾನರ್ ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ಸಂಬಂಧ 30ಕ್ಕೂ ಅಧಿಕ ಮಂದಿ ವಿರುದ್ಧ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಒಟ್ಟಿನಲ್ಲಿ 21ನೇ ಶತಮಾನದ ಈ ಕಾಲದಲ್ಲಿಯೂ ಸಹ, ಮೇಲು ಕೀಳು, ಆ ಜಾತಿ ಈ ಜಾತಿಯಂತೆ ಬಡಿದಾಡಿಕೊಳ್ಳುತ್ತಿದ್ದಾರೆ. 30ಕ್ಕೂ ಅಧಿಕ ಸರ್ವಣೀಯರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಮಲಮಿಶ್ರಿತ ನೀರು ಸೇವಿಸಿ ಮೂವರ ಸಾವು; 21 ದಿನ ಕಳೆದ್ರೂ ತಪ್ಪಿತಸ್ಥರ ಮೇಲೆ ಇಲ್ಲ ಕ್ರಮ
Advertisement