ಚಿತ್ರದುರ್ಗ: ಮತ್ತೆ ಶಾಸಕರ ಬೆಂಬಲಿಗರ ದೌರ್ಜನ್ಯ ಮುಂದುವರೆದಿದ್ದು, ಹಲ್ಲೆಗೊಳಗಾದವರಿಗೆ ಊಟ, ಬಟ್ಟೆ ತರುತಿದ್ದ ಸಂಬಂಧಿಯನ್ನು ಗ್ರಾಮದಲ್ಲಿ ಕಟ್ಟಿಹಾಕಿ ಹಲ್ಲೆ ನಡೆಸಿ, ನಂತರ ಕಿಡ್ನ್ಯಾಪ್ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಹೊಸದುರ್ಗ ಕ್ಷೇತ್ರದ ಶಾಸಕ ಗೋವಿಂದಪ್ಪ ಬೆಂಬಲಿಗರ ದೌರ್ಜನ್ಯ ಮುಂದುವರೆದಿತ್ತು. ಗಂಗಾಧರಪ್ಪ(64) ಹಲ್ಲೆಗೊಳಗಾಗಿ ಕಾಣೆಯಾಗಿರೋ ಯೋಗೇಶ್ ಸಂಬಂಧಿ.
ಯೋಗೀಶ್ ಹಾಗೂ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರ ಸಂಬಂಧಿಕರು ಅವರಿಗೆ ಊಟ ಹಾಗೂ ಬಟ್ಟೆ ತರುತ್ತಿದ್ದರು. ಈಗ ಗಂಗಾಧರಪ್ಪ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಪೊಲೀಸರಿಗೆ ದೂರು ನೀಡಲು ಕರೆ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಯೋಗೇಶ್ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಸರ್ಕಾರಿ ಜಮೀನು ರಕ್ಷಿಸಿ, ಅಕ್ರಮ ಬಯಲಿಗೆಳೆಯಲು ತೆರಳಿದ್ದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ. ಶ್ರೀ ರಾಂಪುರ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಸಿಗದಂತಾಗಿದೆ. ನೊಂದವರ ಕರೆ ಸ್ವೀಕರಿಸಿ, ರಕ್ಷಣೆ ಒದಗಿಸದ ಚಿತ್ರದುರ್ಗ ರಕ್ಷಣಾಧಿಕಾರಿ ಶ್ರೀನಾಥ್ ಎಂ ಜೋಷಿ.ದಿಂದ ಮಾಹಿತಿ ನೀಡಿದ್ದಾರೆ.