ಶಿವಮೊಗ್ಗ: ನಗರದ ಖಾಸಗಿ ಕಾಲೇಜಿನಲ್ಲಿ ನಡೆದ ಕ್ಷುಲ್ಲಕ ಕಾರಣಕ್ಕೆ ಅಮಾಯಕ ವಿದ್ಯಾರ್ಥಿ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ.
ಇಲ್ಲಿನ ಕೆ.ಆರ್.ಪುರಂನ ಶಬರೀಶ್ ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿ. ನನ್ನ ಗೆಳೆಯರ ಜೊತೆ ಗಾಂಧಿ ಪಾರ್ಕಿನಲ್ಲಿ ಕೂತಿದ್ದಾಗ ನಾಲ್ವರು ಬಂದು ನೀನು ಯಾವ ಕಾಲೇಜು ಎಂದು ಕೇಳಿದ್ರು. ಆಗ ನನ್ನ ಕಾಲೇಜಿನ ಹೆಸರು ಹೇಳಿದ ಬಳಿಕ ಹಲ್ಲೆ ಮಾಡಿ ಚೂರಿಯಿಂದ ಇರಿದು ಪರಾರಿಯಾದರು ಎಂದು ಶಬರೀಶ್ ಹೇಳಿದ್ದಾನೆ. ಗಾಯಗೊಂಡಿರುವ ಶಬರೀಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಘಟನೆ ಬಗ್ಗೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕೆಲ ಸಂಘಟನೆಗಳ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೂರಕ್ಕೂ ಹೆಚ್ಚು ಜನ ಮಧ್ಯರಾತ್ರಿವರೆಗೂ ಆಸ್ಪತ್ರೆಯ ಬಳಿ ಜಮಾಯಿಸಿದ್ದರು. ಪೊಲೀಸರು ತಕ್ಷಣ ಆರೋಪಿಗಳ ಬಂಧಿಸಬೇಕು. ಇಲ್ಲವಾದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.
ಸದ್ಯ ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.