ಕ್ವೆಟ್ಟಾ: ಬಲೂಚಿಸ್ತಾನದಲ್ಲಿ (Balochistan) ನಡೆಯುತ್ತಿರುವ ಪ್ರತಿರೋಧ ಚಳುವಳಿಯ ಭಾಗವಾಗಿ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ (Balochistan Liberation Front) ಪಾಕಿಸ್ತಾನದ ಸೇನಾ ವಾಹನದ ಮೇಲೆ ದಾಳಿ ನಡೆಸಿದೆ. ಪರಿಣಾಮ 10ಕ್ಕೂ ಹೆಚ್ಚು ಪಾಕ್ ಸೈನಿಕರು (Pakistan Army) ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಸೇನೆಯು ಬಲೂಚ್ ರಾಜಿ ಆಜೋಯ್ ಸಂಗರ್ ಎಂಬ ಬಲೂಚ್ ಸಶಸ್ತ್ರ ಗುಂಪುಗಳ ಒಕ್ಕೂಟದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಆಕ್ರಮಣಕಾರಿಯಾಗಿ ಮುನ್ನುಗ್ಗಲು ಪ್ರಯತ್ನಿಸಿದಾಗ ಖುಜ್ದಾರ್‌ನ ಜೆಹ್ರಿ ಪ್ರದೇಶದಲ್ಲಿ ಭೀಕರ ದಾಳಿ ನಡೆದಿದೆ. ಇದನ್ನೂ ಓದಿ:ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತ, ಬೆಂಗ್ಳೂರು, ಪುಣೆ ಮಿನುಗುತ್ತೆ – ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ
ಈ ಕುರಿತು ಬಲೂಚ್ ರಾಜಿ ಆಜೋಯ್ ಸಂಗರ್ ವಕ್ತಾರ ಬಲೂಚ್ ಖಾನ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಘರ್ಷಣೆ ಸಮಯದಲ್ಲಿ 10ಕ್ಕೂ ಅಧಿಕ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ. BRASನ ಆರು ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬಲೂಚ್ ಲಿಬರೇಶನ್ ಆರ್ಮಿ, ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್, ಬಲೂಚ್ ರಿಪಬ್ಲಿಕನ್ ಗಾರ್ಡ್ ಮತ್ತು ಸಿಂಧು ದೇಶ್ ರೆವಲ್ಯೂಷನರಿ ಆರ್ಮಿಗಳನ್ನು ಒಳಗೊಂಡಿರುವ ಒಕ್ಕೂಟವು ಒಂದೇ ಧ್ವಜದ ಅಡಿಯಲ್ಲಿ ಒಗ್ಗಟ್ಟಿನಿಂದ ಉಳಿಯುತ್ತವೆ. ಎಲ್ಲ ಪ್ರತಿರೋಧಗಳ ನಡುವೆಯೂ BRAS ಏಕತೆಗೆ ಬದ್ಧರಾಗುವುದನ್ನು ಪುನರುಚ್ಛರಿಸುತ್ತದೆ ಎಂದಿದ್ದಾರೆ.
ಬಲೂಚಿಸ್ತಾನ್ ದೀರ್ಘಕಾಲದಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಸಮಸ್ಯೆಗಳಿಗೆ ಕೇಂದ್ರಬಿಂದುವಾಗಿದೆ. ಈ ಪ್ರದೇಶವು ಪ್ರತ್ಯೇಕತಾವಾದಿ ಚಳುವಳಿಗಳು, ಬಲವಾದ ಮಿಲಿಟರಿ ಸಂಬಂಧಿಸಿದ ಹಿಂಸಾಚಾರಗಳನ್ನು ಎದುರಿಸಿದೆ.ಇದನ್ನೂ ಓದಿ: ದೀಪಾವಳಿ ಬೋನಸ್ ಕೊಟ್ಟಿಲ್ಲ ಅಂತ ಬೇಸರ; ಟೋಲ್ ಸಂಗ್ರಹಿಸದೇ ವಾಹನಗಳನ್ನ ಫ್ರೀ ಬಿಟ್ಟ ಸಿಬ್ಬಂದಿ