ಬಾಲಿವುಡ್ (Bollywood) ಹಾಗೂ ಪಂಜಾಬಿ (Punjab) ನಟ ಅಮನ್ ಧಾಲಿವಾಲ್ (Aman Dhaliwal) ಮೇಲೆ ಮಾರಣಾಂತಿಕ ಹಲ್ಲೆ (Attack) ನಡೆದಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮನ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕಿಡಿಗೇಡಿಯೊಬ್ಬ ಜಿಮ್ ಗೆ ನುಗ್ಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.
ತಮ್ಮ ಪಾಡಿಗೆ ತಾವು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜಿಮ್ ಗೆ ನುಗ್ಗುತ್ತಾನೆ. ಅತ್ತಿತ್ತ ನೋಡಿ, ಅಲ್ಲಿಯೇ ಇದ್ದ ಅಮನ್ ಗೆ ನೀರು ಕೊಡುವಂತೆ ದಬಾಯಿಸುತ್ತಾನೆ. ಅಮನ್ ಕೇರ್ ಮಾಡದೇ ಇದ್ದಾಗ ಮಚ್ಚು ತೋರಿಸಿ ಬೆದರಿಸಲು ಪ್ರಯತ್ನಿಸುತ್ತಾನೆ. ಆ ವ್ಯಕ್ತಿಯನ್ನು ಅಮನ್ ಮಣಿಸಲು ಯತ್ನಿಸುತ್ತಾರೆ. ಈ ವೇಳೆ ಮನಸ್ಸಿಗೆ ಬಂದಂತೆ ವ್ಯಕ್ತಿ ಮಚ್ಚು ಬೀಸುತ್ತಾನೆ. ಈ ಸಮಯದಲ್ಲಿ ಅಮನ್ ಮೈತುಂಬಾ ಗಾಯಗಳಾಗುತ್ತವೆ. ಇದನ್ನೂ ಓದಿ: ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2
ಜೋದಾ ಅಕ್ಬರ್, ಬಿಗ್ ಬದ್ರರ್, ಅಜ್ ದೇ ರಾಂಜಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಮನ್ ಧಾಲಿವಾಲ್ ಎಂದಿನಂತೆ ಜಿಮ್ ಗೆ ಬಂದ ವೇಳೆ ಈ ಘಟನೆ ನಡೆದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.