ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO) ಮತ್ತು ಸಿಸಿಬಿ ಪೊಲೀಸರು ನಗರದ 2 ಪಬ್‌ಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಬಂಧಿಸಿದ್ದಾರೆ.
ನಗರದಲ್ಲಿ ಐಷಾರಾಮಿ ಟೆಕ್ನೋ ಪಾರ್ಟಿಗಳಿಗೆ ವಿವಿಧ ರೀತಿಯ ಡ್ರಗ್ ಸರಬರಾಜು ಮಾಡುತ್ತಿರೋ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ವಿದೇಶಿಗರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಶನಿವಾರ ರಾತ್ರಿ ನಗರದ ಎಂಜಿ ರೋಡ್ (MG Road) ಮತ್ತು ಕೋರಮಂಗಲದ (Koramangala) 2 ಪಬ್‌ಗಳ ಮೇಲೆ ದಾಳಿ ಮಾಡಿದ್ದರು. ಇದನ್ನೂ ಓದಿ: ಮತಾಂತರಕ್ಕೆ ‘ಮಿಟ್ಟಿ, ಕಾಜಲ್, ದರ್ಶನ್’ ಅಂತ ಕೋಡ್ ವರ್ಡ್ ಬಳಸುತ್ತಿದ್ದ ಛಂಗೂರ್ ಬಾಬಾ
ದಾಳಿ ವೇಳೆ ಪಬ್‌ಗಳಲ್ಲಿ ಡಿಜೆ ಆಪರೇಟರ್‌ಗಳಾಗಿ ಕೆಲಸ ಮಾಡ್ತಿದ್ದ ಇಬ್ಬರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಪಬ್‌ಗಳಿಂದಲೇ ಯುವಕರನ್ನು ಸಂಪರ್ಕ ಮಾಡಿ ಡ್ರಗ್ಸ್ ರವಾನಿಸುತ್ತಿದ್ದರು. ಅಷ್ಟೇ ಅಲ್ಲದೇ ಹೊರಗಿನ ಐಷಾರಾಮಿ ಪಾರ್ಟಿಗಳಿಗೂ ಡ್ರಗ್ಸ್ ಸರಬರಾಜು ಮಾಡ್ತಿರೋದು ಗೊತ್ತಾಗಿದೆ. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!
ವಿಚಾರಣೆ ವೇಳೆ ವಿದ್ಯಾಭ್ಯಾಸ ವೀಸಾದಲ್ಲಿ ಬಂದಿರುವ ಹಲವರು, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಂಡು ಡ್ರಗ್ ಪೆಡ್ಲರ್‌ಗಳಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.