ಗದಗ: ಜಿಲ್ಲೆಯ ಲಕ್ಷ್ಮೇಶ್ವರದ (Lakshmeshwara) ಪಟ್ಟಣದ ಗೋಸಾವಿ ಸಮಾಜದವರ ಮೇಲೆ ಅನ್ಯಕೋಮಿನ ಯುವಕರಿಂದಾದ ಹಲ್ಲೆ, ಹಾಗೂ ಪಿಎಸ್‌ಐ ನಡೆ ಖಂಡಿಸಿ ಅ.19ರಂದು ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ ಕೊಟ್ಟಿದ್ದಾರೆ.
ಇಂದು (ಗುರುವಾರ) ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮಸೇನೆ (Sri Ram Sena), ಗೋಸಾವಿ ಸಮಾಜ (Gosavi Samaj) ಹಾಗೂ ವಿವಿಧ ಸಂಘಟನೆಯ ನೇತೃತ್ವದಲ್ಲಿ ಬಂದ್ ಕರೆ ಘೋಷಿಸಿರುವುದಾಗಿ ತಿಳಿಸಿದರು. ವಿಜಯ ದಶಮಿ ದಿನದಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದಿಂದ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾನು ಮಾರ್ಕೆಟ್‌ನಲ್ಲಿ ಅನ್ಯಕೋಮಿನ ಆರೇಳು ಯುವಕರು ಮೆರವಣಿಗೆಯಲ್ಲಿ ನುಗ್ಗಿ ಗೋಸಾವಿ ಯುವಕರ ಮೇಲೆ ಹಲ್ಲೆ ಮಾಡಿ, ಕೇಸರಿ ಶಾಲು ನೆಲಕ್ಕೆ ಎಸೆದು ತುಳಿದು ಹಾಕಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು – ಸಿಎಂ ಸಿದ್ದರಾಮಯ್ಯ ಘೋಷಣೆ
Advertisement
Advertisement
ಈ ಕುರಿತು ಸಮಾಜದವರೆಲ್ಲಾ ಸೇರಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಠಾಣೆ ಪಿಎಸ್‌ಐ ಈರಣ್ಣ ರಿತ್ತಿ ಅವರು ದೂರುದಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಹಲ್ಲೆ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಿ ಅಂತ ಹೇಳಲು ಹೋದವರ ಮೇಲೆ ಪಿಎಸ್‌ಐ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿದರು. ಈ ವಿಷಯವಾಗಿ ಹಲ್ಲೆಕೋರರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಜೊತೆಗೆ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ ಪಿಎಸ್‌ಐ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಘಟಿಕರು ಆಗ್ರಹಿಸಿದರು. ಇದನ್ನೂ ಓದಿ: ಡಿಕೆ ಸುರೇಶ್‌ಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಿಗಲಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಬೆಂಬಲಿಗರು
Advertisement
ಘಟನೆ ಆಗಿ ಐದು ದಿನಗಳಾದರೂ ಯಾವುದೇ ಕ್ರಮ ಆಗದೇ ಇರುವುದಕ್ಕೆ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ ನೀಡಲಾಗಿದೆ. ಗೋಸಾವಿ ಸಮಾಜ, ಶ್ರೀರಾಮಸೇನೆ ಸೇರಿದಂತೆ ಅನೇಕ ಸಂಘಟಿಕರು ಈ ಬಂದ್‌ಗೆ ಬೆಂಬಲ ಸೂಚಿಸಿರುವುದಾಗಿ ಹೇಳಿದ್ದಾರೆ. ಅ.19ರಂದು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶಿಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 50:50 ಅನುಪಾತದಲ್ಲಿ ಹಂಚಿಕೆಯಾಗಿರೊ 1,400 ನಿವೇಶನಗಳನ್ನ ಜಪ್ತಿ ಮಾಡಿ; ಸಿಎಂಗೆ ಬಿಜೆಪಿ ಶಾಸಕ ಆಗ್ರಹ
Advertisement
ಈ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ ಕನ್ನಡಪರ ಹೋರಾಟಗಾರ ಶರಣು ಗೋಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನಾಕಾರ ಶರಣು ಅವರು ಅನ್ಯಕೋಮಿನ ಯುವಕರು ಹಾಗೂ ಪಿಎಸ್‌ಐ ರಿತ್ತಿ ಅವರನ್ನು ಎತ್ತಿಕಟ್ಟಿ ಮಾತನಾಡುತ್ತಿದ್ದಾರೆ. ಮುಸ್ಲಿಂ ಓಲೈಕೆ ಸರಿಯಲ್ಲ. ಮೊದಲು ನಿಮಗೆ ಕನ್ನಡ, ನಾಡು, ನುಡಿ, ಭಾಷೆ ಬಗ್ಗೆ ಕಾಳಜಿ ಇರಲಿ. ಶ್ರೀರಾಮಸೇನೆ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರೆ ಮುಂದೆ ನಿಮ್ಮ ಜಾತಕ ತೆಗೆದು ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸುಳ್ಳು ಆಪಾದನೆ ಮಾಡ್ತಿದ್ದಾರೆ, ನಾವು ಸಿಎಂ ಜೊತೆ ನಿಲ್ಲಬೇಕು: ಕೆಎನ್ ರಾಜಣ್ಣ
ಲಕ್ಷ್ಮೇಶ್ವರ ಪಟ್ಟಣದಲ್ಲಿ ಅನ್ಯಕೋಮಿನ ಗೂಂಡಾಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಗಲಾಟೆಗೆ ಕಾರಣರಾದ ಅನ್ಯಕೋಮಿನ ಯುವಕರ ಬಂಧನವಾಗಬೇಕು. ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿ ಅಧಿಕಾರದ ದರ್ಪದಿಂದ ಮೆರೆಯುವ ಪಿಎಸ್‌ಐ ಈರಣ್ಣ ರಿತ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆ ಆಗುತ್ತಾ? – ಸಚಿವ ಕೆ.ವೆಂಕಟೇಶ್ ಹೇಳಿದ್ದೇನು?
ಈ ವೇಳೆ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ್, ಮಹೇಶ್ ರೋಖಡೆ, ರಾಜು ಗದ್ದಿ, ನಿಖಿಲ್ ಗೋಸಾವಿ, ಸೋಮು ಗುಡಿ, ಕಿರಣ್ ಹಿರೇಮಠ, ವೆಂಕಟೇಶ್ ದೊಡ್ಡಮನಿ, ಈರಣ್ಣ ಪೂಜಾರ, ಪ್ರಾಣೇಶ್ ವ್ಯಾಪಾರಿ, ವಾಸು ಗೋಸಾವಿ, ಮಲ್ಲಿಕಾರ್ಜುನ ಆಳತೋಟದ, ಕಿರಣ್ ಚಿಲ್ಲೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳನ್ನು ಬಂಧಿಸಿದ ಉಗಾಂಡಾ – ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮನವಿ