ಬಿಗ್‍ಬಾಸ್ (Bigg Boss) ಸ್ಪರ್ಧಿ ತನಿಷಾಗೆ (Tanisha Kuppanda) ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಮೇಲೆ ಅಟ್ರಾಸಿಟಿ ದೂರು (Atrocity Case) ದಾಖಲಾಗಿತ್ತು. ಇದೀಗ ಅಟ್ರಾಸಿಟಿ ಕೇಸ್‍ನಲ್ಲಿ ತನಿಷಾಗೆ ಕ್ಲೀನ್‍ಚಿಟ್ ಕೊಡಲಾಗಿದೆ. ಬೆಂಕಿ ತನಿಷಾ ಈಗ ಬಿಸೋ ದೊಣ್ಣೆಯಿಂದ ಪಾರಾಗಿದ್ದಾರೆ ಎನ್ನುತ್ತಿದೆ ಪೊಲೀಸ್ ಮೂಲಗಳು.
ತನಿಷಾ ಕುಪ್ಪಂಡ ಬಿಗ್ ಬಾಸ್ ಶೋನಲ್ಲಿ ಭೋವಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ತನಿಷಾ ವಿರುದ್ಧ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಜಾತಿನಿಂದನೆ ಆರೋಪದಡಿ ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಾಸಿದ್ದರು.
ದೂರಿನ ಜೊತೆ ತನಿಷಾ ಬಿಗ್ ಬಾಸ್ ಶೋನಲ್ಲಿ ಪ್ರತಾಪ್ ಜೊತೆ ಸಂಭಾಷಣೆ ಮಾಡುವಾಗ ಭೋವಿ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ವಿಡಿಯೋ ಕೊಟ್ಟಿದ್ದರು. ಜಾತಿನಿಂದನೆ ಕೇಸ್ ಆಗಿದ್ದರಿಂದ ಡಿವೈಎಸ್ಪಿ ಪ್ರಕರಣ ತನಿಖೆ ಮಾಡಿದ್ದರು. ತನಿಷಾ ಬಿಗ್ ಬಾಸ್ ಶೋನಲ್ಲಿ ಬಳಕೆ ಮಾಡಿರೋ ಆಕ್ಷೇಪಾರ್ಹ ಪದ ಇರುವ ವಿಡಿಯೋ ಆಡಿಯೋ ಒಂದನ್ನ ಪೊಲೀಸರು ಎಫ್‍ಎಸ್‍ಎಲ್‍ಗೆ ಕಳಿಸಿಕೊಟ್ಟಿದ್ದರು. ಎರಡು ತಿಂಗಳ ಬಳಿಕ ಎಫ್‍ಎಸ್‍ಎಲ್‍ವರದಿ ತನಿಖಾಧಿಕಾರಿ ಕೈ ಸೇರಿದೆ.
ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.