ಬೆಂಗಳೂರು: ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದ ಇಬ್ಬರು ನೌಕರರು ಬರೋಬ್ಬರಿ 98 ಲಕ್ಷ ರೂ. ಕದ್ದು ಪರಾರಿಯಾಗಿದ್ದರು. ಇದೀಗ ಆ ಇಬ್ಬರು ನೌಕರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿಶೋರ್ ಮತ್ತು ರಾಕೇಶ್ ಬಂಧಿತರು. ಇಬ್ಬರು ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಆರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಪ್ರತಿನಿತ್ಯ ಎಟಿಎಂಗಳಿಗೆ ಹಣ ತುಂಬಿಸೋದು ಇಬ್ಬರ ಕೆಲಸವಾಗಿತ್ತು. ದಿನಕ್ಕೆ ಕೋಟಿ ಕೋಟಿ ಹಣವನ್ನು ಎಟಿಎಂಗಳಿಗೆ ತುಂಬಿಸುತ್ತಿದ್ದ ಇಬ್ಬರು ಎರಡು ಎಟಿಎಂಗಳಿಗೆ ಹಾಕ ಬೇಕಿದ್ದ 98 ಲಕ್ಷ ಹಣ ಕದ್ದು ಎಸ್ಕೇಪ್ ಆಗಿದ್ದರು.
Advertisement
Advertisement
ಕಿಶೋರ್ ಮತ್ತು ರಾಕೇಶ್ ಇಬ್ಬರೂ ಕಳೆದ ಆರು ವರ್ಷಗಳಿಂದ ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಯಾವುದೇ ಅನುಮಾನ ಬಂದಿರಲಿಲ್ಲ. ಹಣ ಕಳ್ಳತನವಾದ ದಿನ ಇಬ್ಬರು ನಾಪತ್ತೆಯಾಗಿದ್ದರಿಂದ ಸಣ್ಣ ಅನುಮಾನದೊಂದು ಅಧಿಕಾರಿಗಳಿಗೆ ಬಂದಿತ್ತು. ಆರೋಪಿಗಳ ಬೆನ್ನತ್ತಿದಾಗ ಸತ್ಯಾಂಶ ತಿಳಿದಿದೆ. ಕಿಶೋರ್ ಹೋಟೆಲ್ ಬ್ಯುಸಿನೆಸ್ ಮಾಡೋದಕ್ಕೆ ಹೋಗಿ ಕೈ ಸುಟ್ಟಿಕೊಂಡಿದ್ದನು. ಇದಕ್ಕಾಗಿ ಕಳ್ಳತನ ಮಾಡಿದ್ದ ಅನ್ನೋ ಮಾಹಿತಿ ತಿಳಿದಿದೆ.
Advertisement