ಬೀದರ್/ಬೆಂಗಳೂರು: ಹಾಡಹಗಲೇ ಬೀದರ್‌ನಲ್ಲಿ (Bidar) ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮರ ಸುಳಿವು ಕೊನೆಗೂ ಪತ್ತೆಯಾಗಿದೆ.
ಖದೀಮರನ್ನು ಛತ್ತೀಸ್‌ಗಡ ಮೂಲದ ಮನೀಶ್ ಹಾಗೂ ಮತ್ತೋರ್ವ ಕೃತ್ಯ ಎಸಗಿದ್ದು, ಬಿಹಾರದ ಗ್ಯಾಂಗ್‌ಸ್ಟರ್ ಅಮಿತ್ ಗ್ಯಾಂಗ್‌ನ ಮನೀಶ್ ಹಾಗೂ ಮತ್ತೋರ್ವ ಎಟಿಎಂ ದರೋಡೆ ಮಾಡಿರುವುದು ಎಂದು ಎನ್ನಲಾಗಿದೆ.ಇದನ್ನೂ ಓದಿ: ಮಂಗಳೂರು ಬ್ಯಾಂಕ್ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?
Advertisement
Advertisement
ಬೀದರ್‌ನಲ್ಲಿ ಹಾಡಹಗಲೇ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಹೈವೇಯಲ್ಲಿ ಓಡಾಡಿದರೆ ಸಿಕ್ಕಿಬೀಳುತ್ತೇವೆ ಎನ್ನುವ ಭಯದಲ್ಲಿ ಹಳ್ಳಿಗಳಿಂದ ಹೋಗಿ ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದರು. ಮೊದಲೇ ರೂಟ್‌ಮ್ಯಾಪ್ ಮಾಡಿಕೊಂಡಿದ್ದ ಖದೀಮರು ಬೀದರ್ ನಗರದಿಂದ ತೆಲಂಗಾಣದ ಜಹೀರಾಬಾದ್ ತಾಲೂಕು ಮೂಲಕ ಹೈದರಾಬಾದ್‌ಗೆ ಎಂಟ್ರಿ ಕೊಟ್ಟಿದ್ದರು.
Advertisement
ಬೀದರ್ ನಗರದಿಂದ ಆಚೆ ಹೋಗುತ್ತಿದ್ದಂತೆ ಹಣವನ್ನು ಟ್ರ್ಯಾಲಿ ಬ್ಯಾಗ್‌ಗೆ ತುಂಬಿಕೊಂಡು ನಂತರ ಅಫ್ಜಲ್‌ಪುರದಲ್ಲಿ ಟ್ರಾವೆಲ್ ಏಜೆನ್ಸಿ ಜೊತೆ ಜಗಳ ಮಾಡಿಕೊಂಡು ಉತ್ತರಭಾರತದ ಕಡೆಗೆ ಹೋಗಲು ಆಟೋ ಹಿಡಿದಿದ್ದಾರೆ. ಈ ಗಲಾಟೆಗೂ ಮುನ್ನ ಅಫ್ಜಲ್‌ಗಂಜ್ ದೋಸೆ ಕಿಂಗ್ ಹೋಟೆಲ್‌ನಲ್ಲಿ ದೋಸೆ ತಿಂದಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬ್ಯಾಗ್ ಜೊತೆಗಿರೋದು ಪತ್ತೆಯಾಗಿದೆ.
Advertisement
ಈ ಹೋಟೆಲ್‌ನಲ್ಲಿಯೇ ಬಟ್ಟೆ ಬದಲಾಯಿಸಿರುವ ಸಾಧ್ಯತೆಯಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದಾಗ ಜಾಕೆಟ್ ಧರಿಸಿದ್ದವರು ಬಳಿಕ ಬಟ್ಟೆ ಬದಲಿಸಿದ್ದಾರೆ. ಜೊತೆಗೆ ಹೈದ್ರಾಬಾದ್‌ನಲ್ಲಿ ಟ್ರ್ಯಾಲಿ ಬ್ಯಾಗ್ ಎಳೆದೊಯ್ಯುತ್ತಾ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಕಂದರಾಬಾದ್‌ನಿಂದ ಟ್ರೈನ್ ಮೂಲಕ ಉತ್ತರ ಭಾರತಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಅಪರಾಧ ವಿಭಾಗದ ಎಡಿಜಿಪಿ ಹರಿಶೇಖರನ್ ಮಾತನಾಡಿ, ಕರ್ನಾಟಕ, ತೆಲಂಗಾಣ ಸೇರಿದಂತೆ ಮಹಾರಾಷ್ಟ್ರದಲ್ಲೂ ಒಟ್ಟು 8 ತಂಡಗಳು ಶೋಧ ನಡೆಸುತ್ತಿವೆ. ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಬೀದರ್, ಮಂಗಳೂರು ಸರಣಿ ದರೋಡೆ ಕೇಸ್‌ಗಳ ಬಳಿಕ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.ಇದನ್ನೂ ಓದಿ: ಸಿಇಟಿ ಪರೀಕ್ಷೆ ಪಠ್ಯಕ್ರಮ ಪ್ರಕಟಿಸಿದ ಕೆಇಎ