– ಟ್ರಾವೆಲ್ಸ್ ಮ್ಯಾನೇಜರ್‌ಗೆ ಕಂತೆ ಹಣ ನೀಡಲು ಬಂದಾಗ ಶುರುವಾಯ್ತು ಅನುಮಾನ
ಬೀದರ್: ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಎಟಿಎಂ ಹಣ ಕದ್ದೊಯ್ದ ದುಷ್ಕರ್ಮಿಗಳು (ATM Robbery And Murder) ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಇನ್ನೇನು ಸೆರೆಸಿಕ್ಕರು ಅನ್ನುವಷ್ಟರಲ್ಲೇ ಅಲ್ಲೂ ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರು ಹೈದರಾಬಾದ್ನತ್ತ (Hyderabad) ಎಸ್ಕೇಪ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆನ್ನುಹತ್ತಿದ್ದ ಬೀದರ್ ಪೊಲೀಸರು ದರೋಡೆಕೋರರನ್ನ ಪತ್ತೆಮಾಡಿದ್ದರು. ಆದ್ರೆ ಸೆರೆ ಸಿಗದೇ ಎಸ್ಕೇಪ್ ಆಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೀದರ್‌ನಲ್ಲಿ ಫಿಲ್ಮಿ ಸ್ಟೈಲ್ ಎಟಿಎಂ ಹಣ ದರೋಡೆ – ಗನ್‌ಮ್ಯಾನ್ ಇಲ್ಲದೇ ಹಣ ತುಂಬಲು ಬಂದಿದ್ದ ಸಿಬ್ಬಂದಿ
Advertisement
Advertisement
ಬೀದರ್‌ನಲ್ಲಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದ ದರೋಡೆಕೋರರು ಹೈದರಾಬಾದ್‌ನ ರೋಷನ್ ಟ್ರಾವೆಲ್ಸ್‌ನಲ್ಲಿ ಬಸ್ ಬುಕ್ ಮಾಡಿದ್ದರು. ಹೈದರಾಬಾದ್‌ನಿಂದ ರಾಯ್ಪುರಕ್ಕೆ ಬಸ್ ಬುಕ್ ಮಾಡಿದ್ದರು. ಬಸ್ ಹತ್ತುವ ವೇಳೆ ಟ್ರಾವೆಲ್ಸ್ ಮ್ಯಾನೇಜರ್ ಅನುಮಾನಗೊಂಡು ಬ್ಯಾಗ್ ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ದರೋಡೆಕೋರು ನಾವು ಬಸ್‌ನಲ್ಲಿ ಹೋಗ್ಬೇಕು ಇದನ್ನು ತಗೊಳ್ಳಿ ಅಂತ ಒಂದು ಕಂತೆ ಹಣವನ್ನ ಟ್ರಾವೆಲ್ಸ್ ಮ್ಯಾನೇಜರ್‌ಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಟ್ರಾವೆಲ್ಸ್ ಮ್ಯಾಜೇನರ್ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ನನಗೆ ಹಣ ಬೇಡ, ಮೊದಲು ಕೆಳಗಿಳಿಯಿರಿ ಬ್ಯಾಗ್ ಚೆಕ್ ಮಾಡಬೇಕು ಅಂತ ಹೇಳಿದ್ದಾರೆ. ಬ್ಯಾಗ್ ಚೆಕ್ ಮಾಡಲು ಬಿಟ್ಟುಕೊಡದ ದರೋಡೆಕೋರರು ಟ್ರಾವೆಲ್ಸ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
Advertisement
ಸದ್ಯ ಘಟನೆಯಲ್ಲಿ ಬಸ್ ಚಾಲಕ, ಟ್ರಾವೆಲ್ಸ್ ಮ್ಯಾಜೇನರ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದರೋಡೆಕೋರರಿಗಾಗಿ ಬೀದರ್ ಮತ್ತು ಹೈದರಾಬಾದ್ ಪೊಲೀಸರು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆಯೇ ಗುಂಡು – 93 ಲಕ್ಷದೊಂದಿಗೆ ದುಷ್ಕರ್ಮಿಗಳು ಪರಾರಿ
ತನಿಖೆ ಪ್ರಗತಿಯಲ್ಲಿದೆ.