ಬಳ್ಳಾರಿ: ಶಾರ್ಟ್ ಸರ್ಕ್ಯೂಟ್‌ನಿಂದ ಎಸ್‍ಬಿಐ ಬ್ಯಾಂಕ್‍ನ ಎಟಿಎಂ ಹೊತ್ತಿ ಉರಿದ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯಲ್ಲಿ (Hosapete) ನಡೆದಿದೆ.
ನಗರದ ಸರ್ಕಾರಿ ಕಾಲೇಜು ರಸ್ತೆಯ ಫರ್ವಾಜ್ ಪ್ಲಾಜಾದ ಬಳಿಯ ಎಟಿಎಂನಲ್ಲಿ (ATM) ಇಂದು (ಫೆ.28) ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಎರಡು ಅಗ್ನಿಶಾಮಕ ವಾಹನದಲ್ಲಿ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ.
ಎಟಿಎಂ ಒಳಗೆ ಅಂದಾಜು 16 ಲಕ್ಷ ರೂ. ಹಣ (Money) ಇತ್ತು ಎನ್ನಲಾಗಿದೆ. ಜೊತೆಗೆ ಮಳಿಗೆಯ ಮೌಲ್ಯ 40 ರಿಂದ 50 ಲಕ್ಷ ರೂ. ಇರಬಹುದೆಂದು ಅಂದಾಜಿಸಲಾಗಿದೆ.
ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.