ನವದೆಹಲಿ: ಎಟಿಎಂ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‍ನಿಂದ ಉಚಿತ ಮಿತಿಗಿಂತಲೂ ಹೆಚ್ಚು ಬಾರಿ ವಹಿವಾಟು ನಡೆಸಿದ್ದಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹೊಸ ನಿಯಮ 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ತಿಳಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ
Advertisement
Advertisement
ಆರ್‌ಬಿಐ ಜೂನ್‍ನಲ್ಲಿ ಮಾಸಿಕ ಮಿತಿಯನ್ನು ಮೀರಿದ ವಹಿವಾಟಿನ ಶುಲ್ಕವನ್ನು ಹೆಚ್ಚಳ ಗೊಳಿಸುವುದಾಗಿ ಘೋಷಿಸಿತ್ತು. ಆರ್‌ಬಿಐ ಈ ಹಿಂದೆ ಹೊರಡಿಸಿದ ಸುತ್ತೋಲೆಯಲ್ಲಿ ಗ್ರಾಹಕರ ತಿಂಗಳಿನ ವಹಿವಾಟಿನ ಮಿತಿ ಹೆಚ್ಚಿದ್ದಲ್ಲಿ ಮುಂದಿನ ವಹಿವಾಟಿಗೆ 21 ರೂ. ಶುಲ್ಕವನ್ನು ವಿಧಿಸುವ ಬಗ್ಗೆ ತಿಳಿಸಿತ್ತು. ಈ ಹೊಸ ದರದ ಬದಲಾವಣೆ ಜನವರಿ 1 ರಿಂದ ಜಾರಿಗೆ ಬರಲಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ
Advertisement
ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಆಕ್ಸಿಸ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‍ಗಳ ಉಚಿತ ಮಿತಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕ 21 ರೂ. ಪ್ಲಸ್ ಜಿಎಸ್‍ಟಿ ಇರಲಿದೆ. ಈ ಹಿಂದೆ 20 ರೂ. ಇದ್ದ ಶುಲ್ಕ 21 ರೂ.ಗೆ ಏರಿಕೆಯಾಗಲಿದೆ.
Advertisement
ಗ್ರಾಹಕರು ತಮ್ಮ ಎಟಿಎಂನಿಂದ ಮೆಟ್ರೋ ಕೇಂದ್ರಗಳಲ್ಲಿ ಪ್ರತೀ ತಿಂಗಳು 5 ಬಾರಿ ಉಚಿತ ವಹಿವಾಟು ನಡೆಸಬಹುದು. ಮೆಟ್ರೋ ಕೇಂದ್ರ ಅಲ್ಲವಾದಲ್ಲಿ 3 ಬಾರಿ ಉಚಿತ ವಹಿವಾಟಿನ ಸೇವೆ ಇರುತ್ತದೆ. ಈ ಮಿತಿ ದಾಟಿದ್ದಲ್ಲಿ ಮುಂದಿನ ಪ್ರತೀ ವಹಿವಾಟಿನಲ್ಲಿ ನಿಗದಿ ಪಡಿಸಿದಷ್ಟು ಹಣವನ್ನು ಖಾತೆಯಿದ ಕಳೆದುಕೊಳ್ಳುತ್ತಾರೆ.
ಆಗಸ್ಟ್ 1 ರಿಂದ ಜಾರಿಗೆ ಬಂದಿದ್ದ ಕ್ರಮದಲ್ಲಿ ಎಲ್ಲಾ ಬ್ಯಾಂಕ್ ಕೇಂದ್ರಗಳಲ್ಲಿ ಹಣಕಾಸಿನ ವಹಿವಾಟುಗಳಿಗೆ 15-17 ರೂ. ಹಾಗೂ ಹಣಕಾಸೇತರ ವಹಿವಾಟುಗಳಿಗೆ 5-6 ರೂ. ಶುಲ್ಕವನ್ನು ಹೆಚ್ಚಿಸಲು ಕೆಂದ್ರೀಯ ಬ್ಯಾಂಕ್ ಅವಕಾಶ ನೀಡಿತ್ತು.