Connect with us

Bengaluru City

ಸಿಲಿಕಾನ್ ಸಿಟಿಯಲ್ಲಿ ಎಟಿಎಂ ವಾಹನವನ್ನೇ ಕದಿಯಲು ಯತ್ನಿಸಿದ ಕಳ್ಳರು

Published

on

– ಸ್ಥಳೀಯರ ಚೇಸಿಂಗ್‍ನಿಂದ ಆಪರೇಷನ್ ಫೇಲ್

ಬೆಂಗಳೂರು: ಹಾಡಹಗಲೇ ಎಟಿಎಂ ವಾಹನ ಕದ್ದ ಕಳ್ಳರು ವಾಹನ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದು, ಆದರೆ ಸ್ಥಳೀಯರು ಕಳ್ಳರನ್ನು ಚೇಸ್ ಮಾಡಲು ಯತ್ನಿಸಿದ್ದರಿಂದ ದರೋಡೆ ವಿಫಲವಾಗಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಣಸವಾಡಿಯ ಕಲ್ಯಾಣನಗರದಲ್ಲಿ ಈ ಘಟನೆ ನಡೆದಿದ್ದು, ಎಟಿಎಂ ಗೆ ಹಣ ತುಂಬಲು ಸಿಬ್ಬಂದಿ ವಾಹನದಿಂದ ಕೆಳಗಡೆ ಇಳಿಯುತ್ತಿದಂತೆ, ಕಳ್ಳ ವಾಹನ ಚಾಲನೆ ಮಾಡಿ ಹೊರಟಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಎಚ್ಚೆತ್ತು ಕಳ್ಳನನ್ನು ಚೇಸ್ ಮಾಡಿದ್ದರು.

ಘಟನೆ ವೇಳೆ ವಾಹನದಲ್ಲಿ 11 ಲಕ್ಷ ರೂ. ಇತ್ತು. 6 ಲಕ್ಷ ಹಣವನ್ನು ಎಟಿಎಂ ತುಂಬಲು ಕೆಳಗಡೆ ಇಳಿದಿದ್ದರು. ಈ ವೇಳೆ ಚಾಲಾಕಿ ಕಳ್ಳ ವಾಹನದೊಂದಿಗೆ ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ ಸಾರ್ವಜನಿಕರು ಆತನನ್ನು ಚೇಸ್ ಮಾಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಕಳ್ಳ ವಾಹನ ಚಾಲನೆ ಮಾಡುತ್ತಿದಂತೆ ಹೊರಕ್ಕೆ ಜಿಗಿದು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಎಟಿಎಂ ಹಣ ಹೊಂದಿದ್ದ ಹಣ ಅಲ್ಲೇ ಇದ್ದ ಟಿಪ್ಪರ್ ಲಾರಿಗೆ ಡಿಕ್ಕಿಯಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಸಾರ್ವಜನಿಕರ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ್ದಾರೆ.

ಅಂದಹಾಗೇ ದರೋಡೆ ಮಾಡಲು ಯತ್ನಿಸಿದ ಎಟಿಎಂ ಹಣದ ವಾಹನ ರೇಡಿಯಂಟ್ ಏಜೆನ್ಸಿಗೆ ಸೇರಿದ್ದು, ವಾಹನದಲ್ಲಿ ಒಟ್ಟು 68 ಲಕ್ಷ ರೂ. ಹಣವಿತ್ತು. ಬೆಳಗ್ಗೆ ಯಿಂದ ವಿವಿಧ ಎಟಿಎಂ ಗಳಿಗೆ ಹಣ ತುಂಬಿದ ಬಳಿಕ ಕಲ್ಯಾಣನಗರದ ಎಟಿಎಂ ಗೆ 6 ಲಕ್ಷ ಹಣ ತುಂಬಲು\ ಮುಂದಾಗಿದ್ದರು. ಈ ವೇಳೆ ಘಟನೆ ನಡೆದಿದ್ದು, ಸದ್ಯ ಪ್ರಕರಣದ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವ ಬಾಣಸವಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಳ್ಳತನದಲ್ಲಿ ಭಾಗಿಯಾದ್ರಾ ಸಿಬ್ಬಂದಿ..?
ಪ್ರಕರಣದಲ್ಲಿ ಏಜೆನ್ಸಿಯವರ ಪಾತ್ರ ಇದೆಯಾ ಎಂದು ಪೊಲೀಸರು ತನಿಖೆ ನಡೆಸಿದ್ದು, ಇದಕ್ಕೆ ಪ್ರಮುಖ ಕಾರಣ ವಾಹನ ಕಳುವು ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ. ವಾಹನದ ಚಾಲಕ ವಿಚಾರಣೆ ವೇಳೆ ಕೀ ನನ್ನ ಬಳಿ ಇದೆ ಎಂದು ಹೇಳಿದ್ದು, ಸದ್ಯ ವಾಹನ ಕಳವು ಮಾಡಲು 2ನೇ ಕೀ ಎಲ್ಲಿ ಲಭ್ಯವಾಗಿದೆ ಎಂದು ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *