ನವದೆಹಲಿ: ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆ ವ್ಯಾಪಕವಾಗಿದೆ ಇದರ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ತೀವ್ರವಾಗಿ ಏರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ (Atishi) ಆರೋಪಿಸಿದ್ದಾರೆ.
Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಲ್ಲು ಸುಡುವ ಬಿಕ್ಕಟ್ಟಿಗೆ ರಾಷ್ಟ್ರವ್ಯಾಪಿ ಪರಿಹಾರ ಕಂಡುಕೊಳ್ಳುವುದು ಕೇಂದ್ರ ಸರ್ಕಾರದ (Central Government) ಜವಾಬ್ದಾರಿಯಾಗಿದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಿಷ್ಕ್ರಿಯವಾಗಿದೆ. ಪಂಜಾಬ್‌ನಲ್ಲಿ ಹುಲ್ಲು ಸುಡುವುದು ನಿಯಂತ್ರಿಸಬಹುದಾದರೆ ಉಳಿದ ರಾಜ್ಯಗಳಲ್ಲಿ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ
Advertisement
Advertisement
ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಕಳೆದ ರಾತ್ರಿ, ನನಗೆ ಹಲವಾರು ಕರೆಗಳು ಬಂದವು. ಕೆಲವರು ವಯಸ್ಸಾದ ಕುಟುಂಬ ಸದಸ್ಯರನ್ನು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ, ಇತರರು ತಮ್ಮ ಮಕ್ಕಳಿಗೆ ಸ್ಟೀರಾಯ್ಡ್‌ಗಳನ್ನು ಹುಡುಕುತ್ತಿದ್ದಾರೆ. ಉತ್ತರ ಭಾರತವು ಇಂದು ಆರೋಗ್ಯ ತುರ್ತು ಪರಿಸ್ಥಿತಿ (Health Emergency) ಎದುರಿಸುತ್ತಿದೆ, ಪ್ರದೇಶದಾದ್ಯಂತ ನಗರಗಳು ‘ತೀವ್ರ’ ಮತ್ತು ‘ಅತ್ಯಂತ ಕಳಪೆ’ AQI ಮಟ್ಟವನ್ನು ದಾಖಲಿಸುತ್ತಿವೆ ಎಂದರು. ಇದನ್ನೂ ಓದಿ: ಅಧಿಕಾರ ದಾಹಕ್ಕಾಗಿ ಏನು ಮಾಡಲು ಹಿಂಜರಿಯದವರು ಅಂದ್ರೆ ಅದು ಬಿಜೆಪಿಯವರು: ಈಶ್ವರ್ ಖಂಡ್ರೆ
Advertisement
ಹುಲ್ಲು ಸುಡುವಿಕೆ ಉತ್ತರ ಪ್ರದೇಶದಲ್ಲಿ 60% ನಷ್ಟು ಹೆಚ್ಚಳವಾಗಿದೆ, ಆದರೆ ಮಧ್ಯಪ್ರದೇಶವು ಪ್ರಸ್ತುತ ಅತಿ ಹೆಚ್ಚು ಹುಲ್ಲು ಸುಡುತ್ತಿದೆ ಅಲ್ಲಿ ಪ್ರತಿದಿನ 700ಕ್ಕೂ ಹೆಚ್ಚು ಘಟನೆಗಳು ವರದಿಯಾಗುತ್ತವೆ. ಕಳೆದ 6-7 ವರ್ಷಗಳಿಂದ, ದೇಶಾದ್ಯಂತ ಹುಲ್ಲು ಸುಡುವ ಘಟನೆಗಳು ಹೆಚ್ಚಾಗುತ್ತಿವೆ, ಪಂಜಾಬ್ ಹುಲ್ಲು ಸುಡುವಿಕೆ 80% ಕಡಿತವನ್ನು ಸಾಧಿಸಬಹುದಾದರೆ, ಇತರ ರಾಜ್ಯಗಳು ಏಕೆ ಸಾಧ್ಯವಿಲ್ಲ? ಉತ್ತರ ಭಾರತದಾದ್ಯಂತ ನಗರಗಳಲ್ಲಿನ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಕೇಂದ್ರ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಲಿನ್ಯವು ರಾಜ್ಯದ ಗಡಿಗಳನ್ನು ಅಥವಾ ರಾಜಕೀಯ ಸಂಬಂಧಗಳನ್ನು ಗುರುತಿಸುವುದಿಲ್ಲ ಎಂಬುದನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು, ಮಾಸ್ಕ್ ಹಂಚುವ ರಾಜಕೀಯ ಮಾಡುವುದು ಬಿಟ್ಟು ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ದೇವೇಗೌಡ, ಕುಮಾರಸ್ವಾಮಿ ಯಾವತ್ತು ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ಮಾತಾಡಿಲ್ಲ- ಸಿಎಂ