ಹಿರಿಯ ಅಧಿಕಾರಿಯಿಂದ ಬೆದರಿಕೆ, 2 ವಾರದೊಳಗೆ ನನ್ನ ಕೊಲ್ಬೋದು – ಅತೀಕ್ ಸಹೋದರ ಅಶ್ರಫ್

Public TV
1 Min Read
Ashraf Ahmed Uttar Pradesh Umesh Pal

ಲಕ್ನೋ: ನನಗೆ ಹಿರಿಯ ಅಧಿಕಾರಿಯಿಂದ ಜೀವ ಬೆದರಿಕೆಯಿದೆ ಎಂದು ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ (Atiq Ahmed) ಸಹೋದರ ಅಶ್ರಫ್ ಅಹ್ಮದ್ (Ashraf Ahmed) ಹೇಳಿಕೆ ನೀಡಿದ್ದಾನೆ.

2006ರಲ್ಲಿ ಉಮೇಶ್ ಪಾಲ್ (Umesh Pal) ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ 7 ಜನರಲ್ಲಿ ಅಶ್ರಫ್ ಅಹ್ಮದ್ ಕೂಡಾ ಒಬ್ಬ. ತನಗೆ ಜೀವಬೆದರಿಕೆಯಿದ್ದು, 2 ವಾರದೊಳಗೆ ನನ್ನನ್ನು ಕೊಲೆ ಮಾಡಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದಾನೆ.

Atiq Ahmed Uttar Pradesh

ಮಂಗಳವಾರ ಅಶ್ರಫ್‌ನನ್ನು ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಅತೀಕ್‌ನನ್ನು ಗುಜರಾತ್‌ನ ಸಾಬರಮತಿ ಜೈಲಿಗೆ ಕರೆತರಲಾಗುತ್ತಿದೆ. ಅಶ್ರಫ್‌ನನ್ನು ಬರೇಲಿ ಜೈಲಿಗೆ ಸ್ಥಳಾಂತರಿಸುವಾಗ ನನ್ನನ್ನು ಜೈಲಿನಿಂದ ಹೊರಗೆ ಕರೆದೊಯ್ಯುವ ಸಂದರ್ಭದಲ್ಲಿ 2 ವಾರಗಳ ಒಳಗಾಗಿ ಕೊಲ್ಲುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

ಈ ಹಿಂದೆ ಅಶ್ರಫ್ ತನ್ನನ್ನು ದಯವಿಟ್ಟು ಜೈಲಿನಿಂದ ಹೊಗೆ ಕರೆದುಕೊಂಡು ಹೋಗಬೇಡಿ. ಜೈಲಿನಿಂದ ಆಚೆ ಕರೆದುಕೊಂಡು ಹೋಗುವ ವೇಳೆ ನನ್ನನ್ನು ಕೊಲೆ ಮಾಡುವ ಸಾಧ್ಯತೆಯಿದೆ ಎಂದು ಭೀತಿ ವ್ಯಕ್ತಪಡಿಸಿದ್ದ. ಇದೀಗ ಅಶ್ರಫ್ ನನ್ನನ್ನು ಜೈಲಿನಿಂದ ಆಚೆ ಕರೆದುಕೊಂಡು ಹೋಗುವ ವೇಳೆ 2 ವಾರಗಳಲ್ಲಿ ಕೊಲ್ಲುವುದಾಗಿ ಅಧಿಕಾರಿಯೊಬ್ಬರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

uttar pradesh 1

ಬೆದರಿಕೆಯ ಕುರಿತು ಮಾತನಾಡಿದ ಅಶ್ರಫ್, ತನಗೆ ಬೆದರಿಕೆಯನ್ನು ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ. ಅವರ ಹೆಸರನ್ನು ಮುಖ್ಯಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅಲಹಾಬಾದ್ ಮುಖ್ಯ ನ್ಯಾಯಮೂರ್ತಿಗೆ ಬಹಿರಂಗಪಡಿಸುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು?- ರೈಲ್ವೆ ಎಚ್ಚರಿಕೆ

Share This Article