ಕೋಚ್ ಪತ್ನಿಯಿಂದ ಅಥ್ಲಿಟ್ ಮೇಲೆ ಹಲ್ಲೆ- ವೀಡಿಯೋ ವೈರಲ್

Public TV
2 Min Read
athlete coach

ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರ ವೀಡಿಯೋ ವಾಟ್ಸಪ್‌ನಲ್ಲಿ ಹಂಚಿಕೊಂಡ ಕುರಿತಾಗಿ ಕೋಚ್ ಪತ್ನಿ ಮತ್ತು ಅಥ್ಲಿಟ್ (Athlete) ಮಧ್ಯೆ ವಾಗ್ವಾದ ಶುರುವಾಗಿದ್ದು, ಕೋಚ್ (Coach) ಪತ್ನಿ ಅಥ್ಲಿಟ್ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬೆಂಗಳೂರಿನ (Bengaluru) ಕಂಠೀರವ ಮೈದಾನದಲ್ಲಿ (Kanteerava Stadium) ಘಟನೆ ನಡೆದಿದ್ದು, ಬಿಂದುರಾಣಿ ಎಂಬ ಅಥ್ಲಿಟ್ ಬೆಳಗ್ಗೆ ಪ್ರಾಕ್ಟಿಸ್‌ಗೆಂದು ಹೋದ ವೇಳೆ ಶ್ವೇತಾ ಎಂಬ ಮಹಿಳೆ ಆಕೆಯನ್ನು ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಥ್ಲಿಟ್ ಬಿಂದುರಾಣಿ, ಖಾಸಗಿ ಕಾರ್ಯಕ್ರಮವೊಂದರ ವೀಡಿಯೋವೊಂದನ್ನು ಕೋಚ್‌ಗಳ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆ. ಆ ವಿಡಿಯೋದಲ್ಲಿ ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಯತೀಶ್ ಎಂಬವರ ಪತ್ನಿ ಹಲ್ಲೆಗೆ ಯತ್ನಿಸಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಗೆ ಮಾತೃವಿಯೋಗ

ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಗ್ರೂಪ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕುರಿತು ಗ್ರೂಪ್‌ನಲ್ಲಿ ಸ್ಪಷ್ಟನೆ ಕೊಡದೆ ನೇರವಾಗಿ ಕಾಲ್ ಮಾಡಿದೆ. ಕೆಲವೇ ನಿಮಿಷದಲ್ಲಿ ಕಾಲ್ ಕಟ್ ಆಯಿತು. ನಾನು ಅಲ್ಲಿಗೆ ಸುಮ್ಮನಾದೆ. ಆ ಘಟನೆ ಆದ ಬಳಿಕ ಇಂದು ಬೆಳಗ್ಗೆ ಕೋಚ್ ಯತೀಶ್ ಅವರ ಪತ್ನಿ ಬಂದು ಗಲಾಟೆ ಮಾಡಿದ್ದಾರೆ. ನಾನು ವಿಷಯ ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಾದೆ. ಘಟನೆಯ ಸಂಬಂಧ ಅಥ್ಲೆಟಿಕ್ ಅಸೋಸಿಯೇಷನ್‌ಗೆ ದೂರು ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 20 ಬಾಕ್ಸ್ ಟೊಮೆಟೋ 58 ಸಾವಿರಕ್ಕೆ ಮಾರಾಟ- ರೈತ ಫುಲ್ ಖುಷ್

ಬಿಂದುರಾಣಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಶ್ವೇತಾ ಜಿ.ಕೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಖೇಲ್‌ರತ್ನ ಪ್ರಶಸ್ತಿ ಸಂಬಂಧ ಪೋಸ್ಟ್ ಮಾಡಿಕೊಂಡಿದ್ದಕ್ಕೆ ನನ್ನ ಗಂಡ ಯತೀಶ್ ಬಿಂದುಗೆ ಗ್ರೂಪ್‌ನಲ್ಲಿಯೇ ಪ್ರಶ್ನೆ ಮಾಡಿದ್ದರು. ಕೋಚ್‌ಗ್ರೂಪ್‌ನಲ್ಲಿ ಉತ್ತರ ಕೊಡಬೇಕಿದ್ದ ಬಿಂದುರಾಣಿ, ರಾತ್ರಿ 10 ಗಂಟೆಗೆ ಆಕೆಯ ಗಂಡನ ಕಡೆಯಿಂದ ನನ್ನ ಪತಿ ಯತೀಶ್‌ಗೆ ಕಾಲ್ ಮಾಡಿಸಿ ಬೆದರಿಕೆ ಹಾಕಿಸಿದ್ದಾಳೆ. ನನ್ನ ಪತಿ ಕಾಲ್ ಕಟ್ ಮಾಡಿದ ನಂತರ ಕಾಲು ಗಂಟೆಯಲ್ಲಿ ಮತ್ತೊಮ್ಮೆ ಕರೆ ಮಾಡಿದ್ದಾರೆ. ಈ ವೇಳೆ ನಾನು ಕಾಲ್ ರಿಸೀವ್ ಮಾಡಿ ಮಾತನಾಡುವಾಗ, ನನಗೆ ದೊಡ್ಡವರು ಗೊತ್ತು. ನಿಮ್ಮನ್ನು ಸ್ಟೇಡಿಯಂನಿಂದಲೇ ಹೊರಹಾಕಿಸುತ್ತೇನೆ ಎಂದು ಹೇಳಿದ್ದಾಳೆ. ಆ ಕಾರಣಕ್ಕಾಗಿ ಶನಿವಾರವೇ ಹೋಗಿದ್ದೆ. ಆದರೆ ಸಿಗಲಿಲ್ಲ. ಹಾಗಾಗಿ ಇವತ್ತು ಹೋಗಿ ಮಾತನಾಡಿದೆ ಎಂದರು. ಇದನ್ನೂ ಓದಿ: ಡಿಪೋ ಆವರಣದಲ್ಲಿ ನೇಣಿಗೆ ಶರಣಾದ ಸಾರಿಗೆ ನೌಕರ

ಬಿಂದು ನಾನು ಮೊದಲಿನಿಂದಲೇ ಒಟ್ಟಿಗೆ ಅಭ್ಯಾಸ ಮಾಡಿದ ಪರಿಚಯ ಇದ್ದ ಕಾರಣ ಏರುಧ್ವನಿಯಲ್ಲಿ ಮಾತನಾಡಿದ್ದು ನಿಜ. ಬಿಂದುರಾಣಿ ಗಂಡನ ಕಡೆಯಿಂದ ಕಾಲ್ ಮಾಡಿಸಿದ್ದಕ್ಕೆ ನಾನು ನನ್ನ ಗಂಡನ ಪರವಾಗಿ ಹೋಗಿ ಮಾತನಾಡಿದ್ದೇನೆ. ಬಿಂದುರಾಣಿ ಈ ಹಿಂದೆ ನಮ್ಮ ಬಾಕ್ಸ್‌ನಿಂದ ಒಂದು ಲಕ್ಷ ಕಳ್ಳತನ ಮಾಡಿದ್ದಳು. ಹಿರಿಯರು ಮಧ್ಯಪ್ರವೇಶ ಮಾಡಿದ್ದರಿಂದ ದೂರು ಕೊಟ್ಟಿರಲಿಲ್ಲ. ಅವಳು ಕಾನೂನಾತ್ಮಕವಾಗಿ ಹೋದರೆ ನಾನೂ ಕಾನೂನಾತ್ಮಕವಾಗಿ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಮದುವೆ ನಿರಾಕರಣೆ- ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ದುರ್ಮರಣ

Web Stories

Share This Article